ದೇವನಹಳ್ಳಿ : ಹೊಸ ಮನೆಯ ಗೃಹ ಪ್ರವೇಶದ ವೇಳೆ ಸಿಲಿಂಡರ್ ಸ್ಪೋಟಗೊಂಡು 6 ಮಂದಿ ಆಸ್ಪತ್ರೆ ಪಾಲಾಗಿರುವ ಘಟನೆ ದೇವನಹಳ್ಳಿಯಲ್ಲಿ ನಡೆದಿದ್ದು. ಗಾಯಗೊಂಡವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ದರ್ಗಾಜೋಗಹಳ್ಳಿಯಲ್ಲಿ ಘಟನೆ ನಡೆದಿದ್ದು. ಗಾಯಾಳು ರವಿಕುಮಾರ್ ಎಂಬುವವರ ಮನೆಯ ಗೃಹ ಪ್ರವೇಶದ ವೇಳೆ ಸಿಲಿಂಡರ್ ಸ್ಪೋಟಗೊಂಡಿದೆ. ಸ್ಪೋಟದಲ್ಲಿ 6 ಜನರಿಗೆ ಗಂಭೀರ ಗಾಯವಾಗಿದ್ದು. ಅದೃಷ್ಟವಶಾತ್ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ : ಕೇಂದ್ರ ಸರ್ಕಾರ ಬಜೆಟ್ನಲ್ಲಿ ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಪರಿಹಾರ ನೀಡಿಲ್ಲ: ಎಚ್.ಕೆ ಪಾಟೀಲ್
ಗಾಯಾಳುಗಳನ್ನು ರವಿಕುಮಾರ್ (41) ವರ್ಷಿತಾ (21), ಅನುಸೂಯ(37) ಭಾಗ್ಯಮ್ಮ(55) ,ಚಿರಂತ್(11) ಮಿಥುನ್(14) ಎಂದು ಗುರುತಿಸಿದ್ದು. ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.