ಜಿಯಾಂಗ್ಸು : ಚೀನಾದ ಜಿಯಾಂಗ್ಸು ಪ್ರಾಂತ್ಯದ ತೈಝೌನಲ್ಲಿರುವ ಮೃಗಾಲಯವೊಂದು ಚೌ ಚೌ ಜಾತಿಯ ನಾಯಿಗಳಿಗೆ ಕಪ್ಪು ಮತ್ತು ಕೇಸರಿ ಬಣ್ಣ ಬಳಿದು ಇದು ಪಟ್ಟೆ ಹುಲಿಯೆಂದು ಹೇಳಿ ಪ್ರವಾಸಿಗರಿಗೆ ಟೋಪಿ ಹಾಕಿದೆ. ಈ ನಾಯಿಗಳ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದು ಸಖತ್ ವೈರಲ್ ಆಗಿದೆ.
ಹೌದು ಚೀನಾದ ಮೃಗಾಲಯ ಹುಲಿಯಂತೆ ಕಾಣಲು ಚೌ ಚೌ ನಾಯಿಗಳಿಗೆ ಬಣ್ಣ ಬಳಿದಿದ್ದು, ಪ್ರಚಾರದ ಭಾಗವಾಗಿ ಹೀಗೆ ಮಾಡಿದ್ದು, ಎಂದು ಮೃಗಾಲಯದ ಆಡಳಿತ ಮಂಡಳಿ ತಪ್ಪು ಒಪ್ಪಿಕೊಂಡಿದೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ಮೃಗಾಲಯದ ಈ ಗಿಮಿಕ್‌ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಚೀನಾದ ಜಿಯಾಂಗ್ಸು ಪ್ರಾಂತ್ಯದ ತೈಝೌನಲ್ಲಿರುವ ಮೃಗಾಲಯವೊಂದು ಚೌ ಚೌ ಜಾತಿಯ ನಾಯಿಗಳಿಗೆ ಕಪ್ಪು ಮತ್ತು ಕೇಸರಿ ಬಣ್ಣ ಬಳಿದು ಇದು ಪಟ್ಟೆ ಹುಲಿಯೆಂದು ಹೇಳಿ ಪ್ರವಾಸಿಗರಿಗೆ ಟೋಪಿ ಹಾಕಿದೆ. ಈ ನಾಯಿಗಳ ವಿಡಿಯೋವನ್ನು ವ್ಯಕ್ತಿಯೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಇದು ಸಖತ್ ವೈರಲ್ ಆಗಿ ಮೃಗಾಲಯದ ವಿರುದ್ಧ ಬಾರೀ ಆಕ್ರೋಶ ಕೂಡಾ ವ್ಯಕ್ತವಾಗಿತ್ತು.
ಇದನ್ಣೂ ಓದಿ :ತಲೈವನ ಜೊತೆ ಕೊಡಗಿನ ಕುವರಿ ರಶ್ಮಿಕಾ ಸಿನಿಮಾ ?
ಇದಕ್ಕೂ ಮುನ್ನ ಮೃಗಾಲಯದ ಪಾಂಡಾಗಳನ್ನು ಹೋಲುವಂತೆ ನಾಯಿಗಳಿಗೆ ಬಣ್ಣ ಬಳಿದು ಟೀಕೆಗೆ ಗುರಿಯಾದ ಘಟನೆ ವರದಿಯಾಗಿತ್ತು. ಇದೀಗ ನಾಯಿಗಳಿಗೆ ಹುಲಿಯ ಬಣ್ಣ ಬಳಿದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.