Saturday, February 1, 2025

ಹೂತಿರುವ ಶವವನ್ನು ಹೊರೆಗೆ ತೆಗೆದು ಮತ್ತೊಂದು ಶವದ ಅಂತ್ಯಕ್ರಿಯೆ

ವಿಜಯಪುರ : ಈಗಾಗಲೇ ಅಂತ್ಯಸಂಸ್ಕರಾ ಮಾಡಿದ್ದ ಶವವನ್ನು ಹೊರೆಗೆ ತೆಗೆದು ಮತ್ತೊಂದು ಶವವನ್ನು ಹೂತಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು. ಜನರು ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಹೌದು.. ವಿಜಯಪುರ ನಗರದ ಜಿಲ್ಲಾ ಪಂಚಾಯತ ರಸ್ತೆಯಲ್ಲಿರುವ ರುದ್ರಭೂಮಿ ಘಟನೆ ನಡೆದಿದ್ದು. ಯಾರೋ ದುಷ್ಕರ್ಮಿಗಳು ಶವವನ್ನು ಹೂಳಲು ಬೇರೆ ಗುಂಡಿಯನ್ನು ಅಗೆಯದೆ. ಹಾಗಾಗಲೇ ಶವವನ್ನು ಹೂತ್ತಿದ್ದ ಗುಂಡಿಯನ್ನು ಅಗೆದು ಆ ಶವವನ್ನು ಹೊರಗೆ ತೆಗೆದು, ಮತ್ತೊಂದು ಶವವನ್ನು ಹೂತ್ತಿದ್ದಾರೆ.

ಇದನ್ನೂ ಓದಿ :ಬಸ್​ ಮುಂಭಾಗದ ಗಾಜು ಒಡೆದು ಪುಂಡಾಟ ಮೆರೆದಿದ್ದ ಪುಡಿರೌಡಿ ಕಾಲಿಗೆ ಗುಂಡೇಟು 

ಹೊರಗೆ ಶವವಿನ್ನು ಹಸಿಯಾಗಿದ್ದು. ಸ್ಮಶಾಣದ ಸುತ್ತಮುತ್ತ ದುರ್ನಾತ ಬೀರುತ್ತಿದೆ ಎಂದು ತಿಳಿದು ಬಂದಿದೆ. ಶವವನ್ನು ರುದ್ರಭೂಮಿಯ ಕಾಂಪೌಂಡ್​ ಬಳಿಯಲ್ಲಿ ಹಾಕಿದ್ದು. ಶವವನ್ನು ನೋಡಿದ ಜನರು ಭಯಭೀತಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಸ್ಥಳೀಯರು ಮಹಾನಗರ ಪಾಲಿಕೆ ಅಧಿಕಾರಿಗಳ ಮೇಲೆ ಪ್ರತಿಭಟನೆ ನಡೆಸಿದ್ದು. ಇಂತಹ ಘಟನೆಗಳು ನಡೆಯದಂತೆ ತಡೆಯಬೇಕು ಎಂದು ಆಗ್ರಹಿಸಿದ್ದಾರೆ. ಈ ಘಟನೆಗೆ ಮುನ್ನ ಅನೇಕ ಬಾರಿ ಹೂತಿರುವ ಶವವನ್ನು ಹೊರಗೆ ತೆರೆದು ಮತ್ತೊಂದು ಶವವನ್ನು ಹೂತಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

 

RELATED ARTICLES

Related Articles

TRENDING ARTICLES