Saturday, February 1, 2025

ವಿಮ್ಸ್​ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾ*ವು: ವೈದ್ಯರ ನಿರ್ಲಕ್ಷ ಎಂದ ಕುಟುಂಬಸ್ಥರು

ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರ (ವಿಮ್ಸ್‌)ದಲ್ಲಿ ಶನಿವಾರ ಬೆಳಗ್ಗೆ ಬಾಣಂತಿಯೊಬ್ಬರು ಸಾವಿಗೀಡಾಗಿದ್ದಾರೆ.ಕುರುಗೋಡು ತಾಲೂಕಿನ ಕೋಳೂರು ಗ್ರಾಮದ ನಂದೀಶ್ ಎಂಬುವವರ ಪತ್ನಿ ಮಹಾದೇವಿ(21) ಮೃತರು. ‘ಮಾದೇವಿ ಅವರಿಗೆ ಜ. 25ರಂದು ಸಿಸೇರಿಯನ್ ನೆರವೇರಿಸಲಾಗಿತ್ತು.

ಹೆಣ್ಣು ಮಗುವಿನ ಜನನವಾಗಿತ್ತು. ಅಂದಿನಿಂದಲೂ ಆರೋಗ್ಯವಾಗಿದ್ದ ಮಹಾದೇವಿ ಅವರು ಮೂರು ದಿನಗಳ ಹಿಂದೆ ಅಸ್ವಸ್ಥರಾಗಿದ್ದರು. ವಿಪರೀತ ಜ್ವರ ಬಂದಿತ್ತು. ಸೋಂಕಿನಿಂದಾಗಿ ಮಹಾದೇವಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ. ಆದರೆ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ಅವರು ಕೊಟ್ಟಿಲ್ಲ ಎಂದು ಪತಿ ನಂದೀಶ್ ತಿಳಿಸಿದರು.

ಇದನ್ನೂ ಓದಿ :ಹುಲಿಯಂತೆ ಕಾಣಲು ನಾಯಿಗಳಿಗೆ ಬಣ್ಣ ಬಳಿದ ಚೀನಾ: ವಿಡಿಯೋ ವೈರಲ್​

ಕೆಲವು ಔಷಧಿ ಮತ್ತು ನೆಬುಲೈಸರ್ ಅನ್ನು ಹೊರಗಿನಿಂದ ತರುವಂತೆ ಚೀಟಿ ಬರೆದು ಕೊಡಲಾಗಿದೆ. ತಂದು ಕೊಟ್ಟದ್ದನ್ನೂ ಬಳಸಿಲ್ಲ, ಮಾದೇವಿ ಅವರಿಗೆ ವೈದ್ಯರು ಸರಿಯಾಗಿ ಚಿಕಿತ್ಸೆ ಕೊಡಲಿಲ್ಲ.ಸಿಸೇರಿಯನ್ ಆಗುವುದಕ್ಕೂ ಮೊದಲು ನನ್ನ ಸೋದರಿ ಆರೋಗ್ಯವಾಗಿಯೇ ಇದ್ದರು. ಸಿಸೇರಿಯನ್ ಬಳಿಕವೂ ಒಂದೆರಡು ದಿನ ಆರಾಮವಾಗಿಯೇ ಇದ್ದರು. ಆದರೆ ಸೋಂಕಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಶಸ್ತ್ರಚಿಕಿತ್ಸಾ ಕೊಠಡಿ ಅಥವಾ ಶಸ್ತ್ರಚಿಕಿತ್ಸೆಗೆ ಬಳಸಿದ ಸಾಧನಗಳು ಸರಿಯಾಗಿ ಸ್ವಚ್ಛಗೊಳ್ಳದ ಕಾರಣದಿಂದಲೇ ಹೀಗೆ ಆಗಿದೆ’ ಎಂದು ವಿಮ್ಸ್ ಸಿಬ್ಬಂದಿಯೂ ಆದ ಮಹಾದೇವಿ ಸೋದರ ತಿಳಿಸಿದರು.

ಒಟ್ಟಾರೇಯಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೇಯೆಂದ್ರೆ ಈ ಸರಣಿ ಸಾವಿಗಿಂತ ಮುಂಚೆ ಬಡವರು ಮತ್ತು ಮಾಧ್ಯಮ ವರ್ಗದವರು ಪಾಲಿಗೆ ನೆಚ್ಚಿನ ಆಸ್ಪತ್ರೆಯಾಗಿತ್ತು.ಆದ್ರೇ ಇಂದು ಬಳ್ಳಾರಿ ಸರ್ಕಾರಿ ಆಸ್ಪತ್ರೆಗಳೆಂದ್ರೆ ಸಾವಿನ ಮೆನೆಗಳಾಗಿ ಮಾರ್ಪಟಿವೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

RELATED ARTICLES

Related Articles

TRENDING ARTICLES