ರಾಯಚೂರು : ಮಿಥೇನ್ ತುಂಬಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು. ಟ್ಯಾಂಕರ್ನಿಂದ ಮಿಥೇನ್ ಲೀಕ್ ಆಗುತ್ತದೆ ಎಂದು ತಿಳಿದು ಬಂದಿದೆ. ಮಿಥೇನ್ ಟ್ಯಾಂಕ್ ಬ್ಲಾಸ್ಟ್ ಆಗುವ ಸಾಧ್ಯತೆ ಇದ್ದು. ಸ್ಥಳೀಯ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ರಾಯಚೂರು ತಾಲೂಕಿನ ಗುಂಜಳ್ಳಿ ಬಳಿ ಘಟನೆ ನಡೆದಿದ್ದು.ಚಾಲಕನ ನಿಯಂತ್ರಣ ತಪ್ಪಿ ಮಿಥೇನ್ ಆಯಿಲ್ ತುಂಬಿದ ಲಾರಿ ಪಲ್ಟಿಯಾಗಿದೆ. ಟ್ಯಾಂಕರ್ನಿಂದ ಮಿಥೇನ್ ಸೋರಿಕೆಯಾಗುತ್ತಿದ್ದು. ಅಪಾಯಕಾರಿ ಮಿಥೇನ್ ಸೋರಿಕೆಯಿಂದ ರಾಯಚೂರು ಮತ್ತು ಮಂತ್ರಾಲಯ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :30ಕ್ಕೂ ಅಧಿಕ ಮಹಿಳೆಯರ ಜೊತೆ ಪಲ್ಲಂಗದಾಟ: ಮತ್ತೊಬ್ಬ ಜೂನಿಯರ್ ಪ್ರಜ್ವಲ್ ರೇವಣ್ಣ ಪತ್ತೆ !
ಘಟನಾಸ ಸ್ಥಳಕ್ಕೆ ರಾಯಚೂರು ಎಸ್ಪಿ ಗಜಾನನ ಬಾಳೆ, ಅಡಿಷನಲ್ ಎಸ್ಪಿ ಮತ್ತು ಯರಗೇರಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಮತ್ತು ಆರ್ಟಿಪಿಎಸ್ ಮತ್ತು ಸಿಐಎಸ್ಎಫ್ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದು ಕಾರ್ಯಚರಣೆ ನಡೆಸಿದ್ದಾರೆ. ಮಿಥೆನ್ ಆಯಿಲ್ ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಟ್ಯಾಂಕರ್ ಬ್ಲಾಸ್ಟ್ ಆಗುವ ಆತಂಕವಿದ್ದು. ನೀರಿನೊಂದಿಗೆ ಮಿಥೇನ್ ಆಯಿಲ್ ಮಿಶ್ರಣ ಮಾಡಿ ಟ್ಯಾಂಕರ್ ಖಾಲಿ ಮಾಡಲಾಗುತ್ತಿದೆ.
ಬ್ಲಾಸ್ಟ್ ಆಗುವ ಸಾಧ್ಯತೆ ಇರುವುದರಿಂದ ಸುಮಾರು ಎರಡು ನೂರು ಮೀಟರ್ವರೆಗೂ ಅಪಾಯವಿದ್ದು. ಗ್ರಾಮಸ್ಥರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.