Sunday, May 4, 2025

ಪಿಕ್​ಅಪ್​ ವ್ಯಾನ್​ ಮತ್ತು ಟ್ರಕ್​​ ನಡುವೆ ಭೀಕರ ಅಪಘಾತ: 9 ಮಂದಿ ಸಾ*ವು, 11 ಜನರಿಗೆ ಗಾಯ

ಪಂಜಾಬ್​ : ಪಿಕ್​ಅಪ್ ವ್ಯಾನ್ ಹಾಗೂ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದು, 11ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಘಟನೆ ಪಂಜಾಬ್​ನ ಫಿರೋಜ್​ಪುರದಲ್ಲಿ ಶುಕ್ರವಾರ ನಡೆದಿದೆ.

ಪಂಜಾಬ್​ನ ಫಿರೋಜ್‌ಪುರ ರಸ್ತೆಯ ಗೋಲುಕಾ ತಿರುವಿನಲ್ಲಿ ಈ ಅಪಘಾತ ಸಂಭವಿಸಿದೆ. ಸುಮಾರು 25-30 ಜನರು ಪಿಕಪ್ ವ್ಯಾನ್​ನಲ್ಲಿ ಜಲಾಲಾಬಾದ್‌ಗೆ ಕಾರ್ಯಕ್ರಮಕ್ಕಾಗಿ ಪ್ರಯಾಣಿಸುತ್ತಿದ್ದರು. ಈ ವೇಳೆ ಗೊಲುಕ ತಿರುವಿನಲ್ಲಿ ರಸ್ತೆ ತಡೆ ನಡೆಸುತ್ತಿದ್ದ ಕಂಟೈನರ್ ಲಾರಿಗೆ ವ್ಯಾನ್ ಡಿಕ್ಕಿ ಹೊಡೆದಿದೆ.

ಅಪಘಾತದ ರಭಸಕ್ಕೆ ಐದು ಜನರು ತಕ್ಷಣವೇ ಸಾವನ್ನಪ್ಪಿದರು, ಇತರ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ವೇಳೆ ಕೊನೆಯುಸಿರೆಳೆದರು. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇದೇ ವೇಳೆ ಉಳಿದ ಗಾಯಾಳುಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: 30ಕ್ಕೂ ಅಧಿಕ ಮಹಿಳೆಯರ ಜೊತೆ ಪಲ್ಲಂಗದಾಟ: ಮತ್ತೊಬ್ಬ ಜೂನಿಯರ್ ಪ್ರಜ್ವಲ್​ ರೇವಣ್ಣ ಪತ್ತೆ !

ಗಾಯಗೊಂಡವರಲ್ಲಿ ಹತ್ತು ಮಂದಿಯನ್ನು ಫರೀದ್‌ಕೋಟ್‌ನ ಗುರು ಗೋಬಿಂದ್ ಸಿಂಗ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಉಲ್ಲೇಖಿಸಲಾಗಿದೆ ಮತ್ತು ಒಬ್ಬರನ್ನು ಜಲಾಲಾಬಾದ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎಲ್ಲ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಜಿಲ್ಲಾಡಳಿತ ಭರಿಸಲಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES