ತುಮಕೂರು : ಸರಿಗಮ ಖ್ಯಾತಿಯ ಮಂಜಮ್ಮ ಇತ್ತೀಚೆಗೆ ಅನಾರೋಗ್ಯದಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಮಂಜಮ್ಮಳನ್ನು ಕಳೆದುಕೊಂಡು ದುಖಃದಲ್ಲಿದ್ದ ಕುಟುಂಬಕ್ಕೆ ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಸಾಂತ್ವಾನ ಹೇಳಿದ್ದು. ಧನ ಸಹಾಯ ಮಾಡಿದ್ದಾರೆ.
ಇವರು 2018ರಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಆಯ್ಕೆಯಾಗಿದ್ದ ಮಂಜಮ್ಮ ಮತ್ತು ರತ್ಮಮ್ಮ ಕರ್ನಾಟಕದ ಜನಮನ ಗೆಲ್ಲುವಲ್ಲಿ ಸಫಲರಾಗಿದ್ದರು. ತುಮಕೂರಿನ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಇವರು ದಂಡಿ ಮಾರಮ್ಮ ದೇವಾಲಯದ ಬಳಿಯಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡುತ್ತ ಜೀವನ ಸಾಗಿಸುತ್ತಿದ್ದರು. ಆದರೆ ಇತ್ತೀಚೆಗೆ ಅನಾರೋಗ್ಯದಿಂದ ಮಂಜಮ್ಮ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
ಇದನ್ನೂ ಓದಿ :ಮನೆ ಬಿಟ್ಟು ಬರುವ ಹೆಣ್ಮಕ್ಕಳೆ ಟಾರ್ಗೆಟ್: ವೇಶ್ಯಾವಾಟಿಕೆ ನಡೆಸುತ್ತಿದ್ದ ಆಂಟಿಯರು ಅಂದರ್
ಮೃತ ಕುಟುಂಬಕ್ಕೆ ಡ್ರೋನ್ ಪ್ರತಾಪ್ ಸಾಂತ್ವಾನ !
ಮೃತರ ಕುಟುಂಬಕ್ಕೆ ಬಿಗ್ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಸಾಂತ್ವಾನ ಹೇಳಿದ್ದು. ತಮ್ಮ ಕೈಲಾದ ಹಣ ಸಹಾಯ ಮಾಡಿದ್ದಾರೆ. ಈ ವೇಳೆ ಮೃತ ಮಂಜಮ್ಮ ಭಾವಚಿತ್ರಕ್ಕೆ ನಮನ ಸಲ್ಲಿಸಿದ ಡ್ರೋನ್ ಪ್ರತಾಪ್, ಮಂಜಮ್ಮರ ಅಕ್ಕ ರತ್ನಮ್ಮರ ಆರೋಗ್ಯವನ್ನು ವಿಚಾರಿಸಿದರು.
ರತ್ನಮ್ಮ ಇದೀಗ 5 ತಿಂಗಳ ಗರ್ಭಿಣಿಯಾಗಿದ್ದು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಜೊತೆಗೆ ಅವರ ಹೊಟ್ಟೆಯಲ್ಲಿ ಗಡ್ಡೆ ಇದೆ ಎಂದು ವೈದ್ಯರು ಹೇಳಿದ್ದು. ಮಗು ಜನನವಾದ ನಂತರ ಆಪರೇಷನ್ ಮಾಡುವುದಾಗಿ ಸೂಚಿಸಿದ್ದಾರಂತೆ.