ಚೆನ್ನೈ: ತಮಿಳುನಾಡಿನ ಸೇಲಂನಲ್ಲಿ ಹೆದ್ದಾರಿಯೊಂದರಲ್ಲಿ ರಸ್ತೆ ನಿರ್ಮಾಣಕ್ಕೆ ಎಂದು ಟ್ರಕ್ನಲ್ಲಿ ತಂದಿದ್ದ ಸಿಲಿಂಡರ್ ಸ್ಪೋಟಗೊಂಡಿದ್ದು. ಅಲ್ಲಿಯೇ ಇದ್ದ ಕಾರ್ಮಿಕರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ಸಂಜೆ ಚಿನ್ನಪ್ಪಂಪಟ್ಟಿಯಲ್ಲಿ ಚತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಈ ವೇಳೆ ಸಿಲಿಂಡರ್‌ಗಳನ್ನು ಬಳಸಿ ರಸ್ತೆಯ ಮೇಲೆ ಬಿಳಿ ಗೆರೆಗಳನ್ನು ಹಾಕುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಘಟನೆ ಬಗ್ಗೆ ವಿಡಿಯೋವೊಂದು ದೊರೆತಿದ್ದು. ಇದರಲ್ಲಿ ಟ್ರಕ್ನಲ್ಲಿ ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಳ್ಳುವುದನ್ನು ತೋರಿಸಿದೆ.
ಇದನ್ನೂ ಓದಿ :ಕ್ರೇಂದ್ರ ಬಜೆಟ್ ಮೇಲೆ ನಿರೀಕ್ಷೆ ಇಲ್ಲ, ನಮಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ : ಸಿದ್ದರಾಮಯ್ಯ
ಈ ವೇಳೆ ಅಲ್ಲಿದ್ದ ಓರ್ವ ವ್ಯಕ್ತಿ ಬಕೆಟ್ನಲ್ಲಿ ನೀರನ್ನು ತಂದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾನೆ. ಆದರೆ ಕೆಲವೆ ಸೆಂಕೆಡ್ನಲ್ಲಿ ಸಿಲಿಂಡರ್ ಸ್ಪೋಟಗೊಂಡಿದ್ದು. ಸ್ಪೋಟದ ತೀವ್ರತೆಗೆ ಇಡೀ ಟ್ರಕ್ ಛಿದ್ರಗೊಂಡಿದೆ. ಈ ಅಪಘಾತದಲ್ಲಿ ಯಾರಿಗೋ ಯಾವುದೇ ಅನಾಹುತವಾಗಿಲ್ಲ ಎಂದು ತಿಳಿದು ಬಂದಿದೆ.