Thursday, August 28, 2025
HomeUncategorizedನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಶಾಸಕನೊಬ್ಬನ ಕೈವಾಡವಿದೆ: ಪ್ರಮೋದ ಮುತಾಲಿಖ್​

ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಶಾಸಕನೊಬ್ಬನ ಕೈವಾಡವಿದೆ: ಪ್ರಮೋದ ಮುತಾಲಿಖ್​

ಹುಬ್ಬಳ್ಳಿ : ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ‘ರಾಜ್ಯ ಸರ್ಕಾರ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲಿ ನ್ಯಾಯ ಕೊಡಿಸುವ ಭರವಸೆ ನೀಡಿತ್ತು. ಆದರೆ ಕೊಲೆ ನಡೆದು 9 ತಿಂಗಳು ಕಳೆದಿದೆ. ಆದರೆ ಇದುವರೆಗೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಹೇಳಿದರು.

ನೇಹಾ ಹತ್ಯೆ ಪ್ರಕರಣದಲ್ಲಿ ಸರ್ಕಾರ ಮುಸ್ಲಿಂ ಓಲೈಕೆ ಮಾಡುವ ಮೊಂಡತನ ಪ್ರದರ್ಶನ ಮಾಡುತ್ತಿದೆ. ಸರ್ಕಾರದ ಈ ವರ್ತನೆಯನ್ನು ನಾವು ಖಂಡಿಸುತ್ತೇವೆ. ಈ ರಾಜ್ಯ ಸರ್ಕಾರ ನಿರ್ಲಜ್ಯ ಸರ್ಕಾರವಾಗಿದೆ. ಆದ್ದರಿಂದ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಸಿಬಿಐನಿಂದ ಮಾತ್ರ ಈ ಪ್ರಕರಣದಲ್ಲಿ ನ್ಯಾಯ ಸಿಗಲು ಸಾಧ್ಯವಾಗುತ್ತದೆ.

ನೇಹಾ ಹತ್ಯೆ ಪ್ರಕರಣದ ನಂತರ ರಾಜ್ಯದಲ್ಲಿ 42 ಲವ್ ಜಿಹಾದ್ ಪ್ರಕರಣಗಳು‌ ನಡೆದಿವೆ. ಈ ರೀತಿ ಪ್ರಕರಣಗಳಲ್ಲಿ ಭಾಗಿಯಾಗುವವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಇಂತಹ‌ ಪ್ರಕರಣಗಳಲ್ಲಿ ಸರ್ಕಾರದ್ದು ಎಷ್ಟು ಜವಾಬ್ದಾರಿ ಇದೆಯೋ‌ ಅಷ್ಟೇ ನ್ಯಾಯಾಲಯಗಳಿಗೂ ಜವಾಬ್ದಾರಿ ಇದೆ.
ದೇಶದಲ್ಲಿ ,ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ವಿಶೇಷ ನ್ಯಾಯಾಲಯ ರಚನೆ ಮಾಡಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು‌. ಇಲ್ಲವಾದಲ್ಲಿ ಈ ಪ್ರಕರಣವನ್ನ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ:ಪಕ್ಷ ಬಿಟ್ಟು ಹೋಗುವುದಾದರೆ ಹೋಗಿ: ಸುಧಾಕರ್​ಗೆ ಟಾಂಗ್​ ಕೊಟ್ಟ ಶಾಸಕ ವಿಶ್ವನಾಥ್​

ಕೊಲೆಗಡುಕನ ಪರವಾಗಿ ಮುಸ್ಲೀಂ ವಕೀಲನ ವಕಾಲತು !

ನೇಹಾ ಹತ್ಯೆ ವಿಚಾರದಲ್ಲಿ ಮೌಲ್ವಿಗಳು, ಅಂಜುಮನ್ ಸಂಸ್ಥೆಯಿಂದ ಕೊಲೆಗಡುಕನ ಪರ ವಕಾಲತ್ತು ವಹಿಸಲ್ಲ ಎಂದು ಹೇಳಿದ್ದರು. ಆದರೆ ಇದೀಗ ಮುಸ್ಲೀಂ ವಕೀಲರೊಬ್ಬರು ಕೊಲೆಗಾರನ ಪರ ವಕಾಲತ್ತಿಗೆ ನಿಂತಿದ್ದಾರೆ.
ಆದ್ರೆ ಇದೀಗ ಮುಸ್ಲೀಂ‌ ವಕೀಲರೊಬ್ಬರು ಕೊಲೆಗಾರನ‌ ಪರ ವಕಾಲತ್ತಿಗೆ ನಿಂತಿದ್ದಾರೆ. ಇದನ್ನು ಅಂಜುಮನ್ ಸಂಸ್ಥೆ ಯಾಕೆ ಈ‌ ಬಗ್ಗೆ‌ ಪ್ರಶ್ನೆ ಮಾಡುತ್ತಿಲ್ಲ? ಈ‌ ಕೊಲೆಯ ಹಿಂದೆ ಪ್ರಭಾವಿ ಶಾಸಕರೊಬ್ಬರ ಕೈವಾಡವಿದೆ.

ಆ ಪ್ರಭಾವಿ ಶಾಸಕ ಯಾರು ಎಂಬುದನ್ನು ಸಿಬಿಐಗೆ ನೀಡಿದ ನಂತರ ದಾಖಲೆ ಸಮೇತ ಬಿಡುಗಡೆ ಮಾಡುತ್ತೇನೆ. ಈ ಕುರಿತು ಮೊದಲು ತನಿಖೆಯಾಗಬೇಕು. ನೇಹಾ ಕೊಲೆ ಹಂತಕನಿಗೆ ಶಿಕ್ಷೆಯಾಗಬೇಕು. ಈ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯತನ‌ ಮುಂದುವರೆದಲ್ಲಿ ಶ್ರೀರಾಮಸೇನೆ ಉಗ್ರ ಹೋರಾಟಕ್ಕೆ‌ ಮುಂದಾಗುತ್ತೆ. ರಾಜ್ಯ ಹಾಗೂ ದೇಶದಲ್ಲಿ ಮುಸ್ಲೀಂ ಯುವಕರಿಂದ ಹಿಂದೂ ಯುವತಿಯರ ಮೇಲೆ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಈ ದೌರ್ಜನ್ಯಗಳ ನಡುವೆ ನಮ್ಮ ಹೋರಾಟ ಮುಂದುವರಿಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments