Sunday, August 24, 2025
Google search engine
HomeUncategorizedಕುಂಭಮೇಳದಲ್ಲಿ ಕಾಲ್ತುಳಿತ : ರೈಲುಗಳು ಬಂದ್​, ವಂದತಿಗಳನ್ನು ನಂಬಬೇಡಿ ಎಂದ ಸಿಎಂ. ಯೋಗಿ

ಕುಂಭಮೇಳದಲ್ಲಿ ಕಾಲ್ತುಳಿತ : ರೈಲುಗಳು ಬಂದ್​, ವಂದತಿಗಳನ್ನು ನಂಬಬೇಡಿ ಎಂದ ಸಿಎಂ. ಯೋಗಿ

ಪ್ರಯಾಗ್‌ರಾಜ್‌: ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿ ಹತ್ತು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸೆಕ್ಟರ್​ 2ರಲ್ಲಿ ಸಂಭವಿಸಿದ ಈ ದುರಂತದಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಇದರ ಬೆನ್ನಲ್ಲೆ ಪ್ರಯಾಗ್​ ರಾಜ್​ ಬರುತ್ತದ್ದ ಎಲ್ಲಾ ರೈಲುಗಳನ್ನು ಬಂದ್​ ಮಾಡಲಾಗಿದೆ ಎಂದು ಮಾಹಿತಿ ದೊರೆತಿದೆ.

ಮೌನಿ ಅಮವಾಸ್ಯೆ ಹಿನ್ನಲೆ ಪ್ರಯಾಗ್​​ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ 8ರಿಂದ 10 ಕೋಟಿ ಜನರು ಆಗಮಿಸಿದ್ದು ಇದರ ಪರಿಣಾಮವಾಗಿ ಕಾಲ್ತುಳಿತ ಉಂಟಾಗಿದೆ. ಕೋಟ್ಯಾಂತರ ಭಕ್ತರು ಒಮ್ಮಲೆ ಪುಣ್ಯ ಸ್ನಾನ ಮಾಡಲು ಮುಂದಾದ ಪರಿಣಾಮ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ಉಂಟಾಗಿದೆ.

ಯೋಗಿ ಆದಿತ್ಯನಾಥ್​ ಹೇಳಿಕೆ !

ಸಂಗಮದ ಎಲ್ಲಾ ಘಾಟ್‌ಗಳಲ್ಲಿ ಜನರು ಶಾಂತಿಯುತವಾಗಿ ಸ್ನಾನ ಮಾಡುತ್ತಿದ್ದಾರೆ. ಯಾವುದೇ ವದಂತಿಗೆ ಕಿವಿಗೊಡಬೇಡಿ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್‌ ಜನರಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಹಾಡಹಗಲೇ ಗುಂಡಿನ ದಾಳಿ :ಮಗಳ ಸಾವಿಗೆ ಸೇಡು ತೀರಿಸಿಕೊಂಡನಾ ತಂದೆ..!

ಮಹಾಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಯೋಗಿ ನೀವು ಇರುವ ಗಂಗಾ ಮಾತೆಯ ಘಾಟ್ ಬಳಿಯೇ ಸ್ನಾನ ಮಾಡಿ ತ್ರಿವೇಣಿ ಸಂಗಮಕ್ಕೆ ಹೋಗಲು ಪ್ರಯತ್ನ ಮಾಡಬೇಡಿ ಎಂದು ವಿನಂತಿ ಮಾಡಿದ್ದಾರೆ. ಘಟನೆ ಬಗ್ಗೆ ಪ್ರಧಾನಿ ಮೋದಿ ಮಾಹಿತಿ ಪಡೆದಿದ್ದು. ಮುಖ್ಯಮಂತ್ರಿ ಯೋಗಿ ಜೊತೆ ನಿರಂತರ ಸಂಪರ್ಕದಲ್ಲಿದ್ದು. ಘಟನೆಯ ಬಗ್ಗೆ ಇಂಚಿಂಚು ಮಾಹಿತಿ ಪಡೆದಿದ್ದಾರೆ.

ನಾನು ಸಾಧು ಸಂತರ ಜೊತೆಗೆ ಮಾತನಾಡಿದ್ದೇವೆ. ಮೊದಲು ಭಕ್ತಾಧಿಗಳು ಪುಣ್ಯಸ್ನಾನ ಮಾಡಲಿ. ಆಮೇಲೆ ನಾವು ಸ್ನಾನ ಮಾಡುವುದಾಗಿ ಸಾಧು ಸಂತರು, ಅಖಾಡಗಳ ಮುಖ್ಯಸ್ಥರು ಹೇಳಿದ್ದಾರೆ. ಆರೋಗ್ಯ ಸಮಸ್ಯೆ ಇರುವವರು ದೂರು ನಡೆಯಬೇಡಿ. ಯಾವುದೇ ಘಾಟ್‌ನಲ್ಲಿ ಸ್ನಾನ ಮಾಡಿದರು ಅದು ಗಂಗಾ ನದಿಯ ನೀರು. ಮೌನಿ ಅಮವಾಸ್ಯೆ ಗಂಗಾ ಸ್ನಾನ ಪುಣ್ಯ ಪ್ರಾಪ್ತಿ ಮಾಡಲಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಜನಸ್ತೋಮ ಇರುವ ಹಿನ್ನಲೆ ಜನರು ಸಂಯಮದಿಂದ ವರ್ತಿಸಿ ಎಂದು ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments