ಹುಬ್ಬಳ್ಳಿ : ಜೈಪುರ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೇಳಿದ್ದ ಹೇಳಿಕೆಗೆ ಧ್ವನಿಗೂಡಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ಮೋದಿ ಮತ್ತು ಷಾ ಮಾಡಿರುವ ಪಾಪವನ್ನು ಎಲ್ಲಿ ಹೋದರು ತೊಳಿಯೋಕೆ ಹಾಗಲ್ಲ. ಗಂಗಾ ಸ್ನಾನ ಮಾಡಿದ ತಕ್ಷಣ ಅವರ ಪಾಪ ಕಡಿಮೆ ಆಗಲ್ಲ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಲಾಡ್ ‘ ಮೋದಿ, ಅಮಿತ್ ಷಾ ಸೇರಿಕೊಂಡು ಈ ದೇಶದ ಆರ್ಥಿಕ ವ್ಯವಸ್ಥೆಯನ್ನು ಮೂಲೆ ಗುಂಪು ಮಾಡಿದ್ದಾರೆ. ಇವರ ಪಾಲಿಸಿಗಳಿಂದ ದೇಶದಲ್ಲಿ ಎರಡು ಲಕ್ಷ ಕಿರಾಣಿ ಅಂಗಡಿಗಳು ಮುಚ್ಚಿಹೋಗಿವೆ. ಇದರ ಬಗ್ಗೆ ಯಾರೂ ಮಾತನಾಡಲ್ಲ. ಖರ್ಗೆ ಸಾಹೇಬರು ಮಾತನಾಡಿರುವುದು ಸರಿಯಿದೆ.
ಇದನ್ನೂ ಓದಿ : ಹೆಲ್ಮೆಟ್ ಧರಿಸಿ ಸಾಲ ವಸೂಲಾತಿಗೆ ಬಂದ ಮೈಕ್ರೋಫೈನಾನ್ಸ್ ಸಿಬ್ಬಂದಿ !
ಬಿಜೆಪಿಯವರು ದೇಶದ ಸಾಲದ ಬಗ್ಗೆ ಮಾತನಾಡಲ್ಲ. ನಾನೊಬ್ಬ ಹಿಂದೂ ಆಗಿ ಹೇಳ್ತೀನಿ. ಮೋದಿ, ಅಮಿತ್ ಶಾ ಮಾಡಿರುವ ಪಾಪವನ್ನು ಎಲ್ಲಿ ಹೋದರು ತೊಳಿಯಲು ಸಾಧ್ಯವಾಗಲ್ಲ. ವಾಟ್ಸ್ಆಪ್ ಯೂನಿರ್ವಸಿಟಿ ಫೈನಲ್ ಅಲ್ಲ. ಇದನ್ನು ದೇಶದ ಯುವ ಜನರು ಅರ್ಥ ಮಾಡಿಕೊಳ್ಳಬೇಕು. ಈ ದೇಶ ಕಾಂಗ್ರೆಸ್ ಅಥವಾ ಬಿಜೆಪಿಯವರ ಆಸ್ತಿಯಲ್ಲ ಎಂದು ಹೇಳಿದರು.
ಕೇಂದ್ರದ ಬಜೆಟ್ ಬಗ್ಗೆ ಮಾತನಾಡಿದ ಲಾಡ್ ‘ ಈ ಬಜೆಟ್ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಇವರಿಗೆ ಹಿಂದು-ಮುಸ್ಲೀಂ ಸೆಂಟಿಮೆಂಟ್ ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಹಿಂದೂಗಳಿಗೆ ಏನಾಗಿದೆ ಎಂದು ಡಿಟೇಲ್ಸ್ ಕೊಡ್ತಾರಾ. ಜಿಡಿಪಿ ಬೆಳವಣಿಗೆ ಹೇಗಿದೆ ಎಂದು ಡಿಟೇಲ್ಸ್ ಕೊಡ್ತಾರ. ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಎಂಬಂತೆ ಬಿಜೆಪಿ ಸ್ಥಿತಿಯಾಗಿದೆ, ಇವರು ಲಾಂಚ್ ಮಾಡಿದ ಮೇಕ್ ಇನ್ ಇಂಡಿಯಾ ಏನಾಗಿದೆ ಎಂದು ಬಿಜೆಪಿಯವರ ಮೇಲೆ ಖಾರವಾಗಿ ವಾಗ್ದಾಳಿ ನಡೆಸಿದರು.