Friday, April 4, 2025

ಮಿಸ್ಟರ್​ 360​ ಇಸ್​ ಬ್ಯಾಕ್​ : ಮತ್ತೆ ಬ್ಯಾಟ್​ ಹಿಡಿದು ಘರ್ಜಿಸಲು ಮುಂದಾದ ಎಬಿಡಿ !

ದಕ್ಷಿಣ ಆಫ್ರಿಕಾದ ಐಕಾನ್​ ಎಬಿ.ಡಿವಿಲಯರ್ಸ್ ಸುಮಾರು ನಾಲ್ಕು ವರ್ಷಗಳ ನಂತರ ಮತ್ತೆ ಬ್ಯಾಟ್​ ಹಿಡಿದು ಮೈದಾನಕ್ಕೆ ಮರಳುತ್ತಿದ್ದಾರೆ. ವಿಶ್ವ ಚಾಂಪಿಯನ್​ಶಿಪ್ ಆಫ್​ ಲೆಜೆಂಡ್​ನ 2ನೇ ಆವೃತ್ತಿಯಲ್ಲಿ ಸೌತ್​ ಆಫ್ರಿಕಾ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ​

ಹೌದು…ಕ್ರಿಕೆಟ್​ ಜಗತ್ತಿನ ಶ್ರೇಷ್ಟ ಆಟಗಾರರ ಪಟ್ಟಿಯಲ್ಲಿ ಒಬ್ಬರಾಗಿರುವ ಎಬಿ ಡಿವಿಲಿಯರ್ಸ್​ ಮತ್ತೆ ಕ್ರಿಕೆಟ್​ ಮೈದಾನಕ್ಕೆ ಮರಳುತ್ತಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL)ನ 2ನೇ ಆವೃತ್ತಿಯಲ್ಲಿ ಗೇಮ್ ಚೇಂಜರ್ಸ್ ಸೌತ್ ಆಫ್ರಿಕಾ ಚಾಂಪಿಯನ್ಸ್ ಅನ್ನು ಮುನ್ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ನಿವೃತ್ತ ಮತ್ತು ಗುತ್ತಿಗೆ ಪಡೆಯದ ಕ್ರಿಕೆಟ್ ಆಟಗಾರರನ್ನು ಒಳಗೊಂಡ ಈ ಪ್ರಮುಖ ಟಿ20 ಪಂದ್ಯಾವಳಿಯು ಪ್ರಪಂಚದಾದ್ಯಂತದ ಅಭಿಮಾನಿಗಳಿಗೆ ಕಿಕ್‌ ನೀಡಲಿದೆ.

ಇದನ್ನೂ ಓದಿ :ಮೌನಿ ಅಮಾವಾಸ್ಯೆ ಹಿನ್ನಲೆ ಮಹಾಕುಂಭ ಮೇಳಕ್ಕೆ ಲಕ್ಷಾಂತರ ಭಕ್ತರ ಆಗಮನ !

ಈ ಕುರಿತು ಮಾತನಾಡಿರುವ ಡಿವಿಲಿಯರ್ಸ್ ‘ ನಾಲ್ಕು ವರ್ಷಗಳ ಹಿಂದೆ ನಾನು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದೇನೆ. ಏಕೆಂದರೆ ಇನ್ಮುಂದೆ ಆಡಬೇಕೆಂಬ ಹಂಬಲ ನನಗಿರಲಿಲ್ಲ. ಸಮಯ ಕಳೆದಿದೆ. ನನ್ನ ಚಿಕ್ಕ ಮಕ್ಕಳು ಆಟವನ್ನು ಆಡಲು ಪ್ರಾರಂಭಿಸಿದ್ದಾರೆ. ನಾವು ಉದ್ಯಾನದಲ್ಲಿ ಆಡುತ್ತಿದ್ದೇವೆ. ಒಂದು ರೀತಿಯ ಜ್ವಾಲೆ ಮತ್ತೆ ಬೆಳಗಿದಂತೆ ಭಾಸವಾಗುತ್ತಿದೆ’ ಎಂದು WCL ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹೇಳಿದ್ದಾರೆ.‘

ಜೊತೆಗೆ ಮತ್ತೆ ಡಿವಿಲಿಯರ್ಸ್ ಜಿಮ್​ಗೆ ಮರಳಿದ್ದು. ಜುಲೈನಿಂದ ಆರಂಭವಾಗುತ್ತಿರುವ WCLಗೆ ಸಿದ್ದತೆ ಆರಂಭಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಮೊದಲ ಆವೃತ್ತಿಯಲ್ಲಿ ಭಾರತ ತಂಡ ಕಪ್​ ಗೆಲ್ಲುವಲ್ಲಿ ಯಶಸ್ವಿತಯಾಗಿತ್ತು. ಇದೀಗ ಆಫ್ರಿಕಾ ತಂಡ ಸಾಕಷ್ಟು ಬಲಿಷ್ಟವಾಗಿದ್ದು. ಈ ಭಾರಿಯ ಟೂರ್ನಿ ಕ್ರಿಕೆಟ್​ ಅಭಿಮಾನಿಗಳ ಕಿಕ್​ ಏರಿಸಲಿದೆ ಎಂದು ಹೇಳಲಾಗಿದೆ.

RELATED ARTICLES

Related Articles

TRENDING ARTICLES