ಹಾಸನ : ಕಳೆದ ಕೆಲ ವಾರಗಳಿಂದ ಮೈಕ್ರೋಫೈನಾನ್ಸ್ ಹಾವಳಿಯ ಬಗ್ಗೆ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದು. ಈ ಕಿರುಕುಳಕ್ಕೆ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದೆರಡು ಕಡೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳ ಮಾಧ್ಯಮದ ಕ್ಯಾಮರದಲ್ಲಿಯೂ ಸೆರೆಯಾಗಿತ್ತು. ಇದೀಗ ಹಾಸನದಲ್ಲಿ ಕಿಲಾಡಿ ಸಿಬ್ಬಂದಿಗಳು ಹೆಲ್ಮೆಟ್ ಧರಿಸಿ ಸಾಲವಸೂಲಾತಿಗೆ ಬಂದಿರುವ ವಿಡಿಯೋ ಪವರ್ ಟಿವಿಗೆ ಲಭ್ಯವಾಗಿದೆ.
ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಕಾಳೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಗ್ರಾಮದ ರವಿ-ಫ್ರಭಾ ದಂಪತಿಗಳೂ ಮೈಕ್ರೋ ಫೈನಾನ್ಸ್ನಿಂದ ಸುಮಾರು 50 ಸಾಲ ಪಡೆದಿದ್ದರು. ಇಂದು ಬೆಳ್ಳಂಬೆಳಿಗ್ಗೆಯೆ ಮನೆಗೆ ಎಂಟ್ರಿ ಕೊಟ್ಟಿರುವ ಸಿಬ್ಬಂದಿಗಳು ಸಾಲ ಮರು ಪಾವತಿಸುವಂತೆ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ : ಪಾದಾಚಾರಿಗೆ ಅಪರಿಚಿತ ವಾಹನ ಡಿಕ್ಕಿ : ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾದ ದೇಹ !
ಈ ವೇಳೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ತಮ್ಮ ಮುಖ ಕಾಣಿಸದಂತೆ ಹೆಲ್ಮಟ್ ಧರಿಸಿಕೊಂಡಿದ್ದಾರೆ. ಈ ವೇಳೆ ಸಂತ್ರಸ್ಥ ರವಿ ಸಾಲ ತೀರಿಸಲು ತನ್ನ ಬಳಿಯಲ್ಲಿ ಹಣ ಇಲ್ಲ ಎಂದು ಹೇಳಿದ್ದಾರೆ. ಈ ವೇಳೆ ಸಿಬ್ಬಂದಿಗಳು ಹಣ ಕಟ್ಟುವವರೆಗೂ ಮನೆಯಲ್ಲಿಯೆ ಇರುತ್ತೇವೆ ಎಂದು ಹೇಳಿದ್ದಾರೆ. ಈ ವೇಳೆ ಸಂತ್ರಸ್ಥ ಮತ್ತು ಸಿಬ್ಬಂದಿಗಳ ನಡುವೆ ವಾಗ್ವಾದ ಉಂಟಗಿದೆ.