ಸಿನಿಮಾ : ನಿರ್ದೇಶಕ ಎಸ್‌ಎಸ್ ರಾಜಮೌಳಿ ಅವರು ದಕ್ಷಿಣ ಭಾರತದ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಮುಂಬರುವ ಚಿತ್ರಕ್ಕಾಗಿ ತಾತ್ಕಾಲಿಕವಾಗಿ ಸಿದ್ದತೆಯನ್ನು ಆರಂಭಿಸಿದ್ದಾರೆ. SSMB29 ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರ ನಿರ್ಮಾಣ ಕಾರ್ಯ ಆರಂಭವಾಗಿದ್ದು. ಈ ಸಿನಿಮಾದ ಅಧಿಕೃತ ಘೋಷಣೆ ಹೊರಬೀಳಬೇಕಿದೆ.
ಇದರ ಕುರಿತು ಹಿಂಟ್ ನೀಡುವಂತ ವಿಡಿಯೋವೊಂದನ್ನು ನಿರ್ದೇಶಕ ರಾಜ್ಮೌಳಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಈ ವಿಡಿಯೋದಲ್ಲಿ ನಿರ್ದೇಶಕ ರಾಜ್ಮೌಳಿ ತನ್ನ ಕೈಯಲ್ಲಿ ಭಾರತದ ಪಾಸ್ಪೋರ್ಟ್ ಹಿಡಿದುಕೊಂಡಿದ್ದು. ಸಿಂಹವನ್ನು ಪಂಜರದಲ್ಲಿ ಬಂಧಿಸುವ ಮೂಲಕ ಈ ವಿಡಿಯೋ ಅಂತ್ಯಗೊಂಡಿದೆ. ಈ ಮೂಲಕ ಮುಂಬರುವು ಸಿನಿಮಾಗಾಗಿ ಮಹೇಶ್ ಬಾಬುರನ್ನು ಲಾಕ್ ಮಾಡಿದ್ದೇನೆ ಎಂದು ಹೇಳಲು ಹೊರಟಿದ್ದಾರೆ. ಜೊತೆಗೆ ಈ ವಿಡಿಯೋಗೆ ಕ್ಯಾಪ್ಚರ್ಡ್ ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ.
ಇದನ್ನೂ ಓದಿ : ಮೈಕ್ರೋ ಫೈನಾನ್ಸ್ ಕಿರುಕುಳ : ತುಂಗಭದ್ರಾ ನದಿಗೆ ಹಾರಿ ಶಿಕ್ಷಕಿ ಸಾ*ವು !
ಈ ಪೋಸ್ಟರ್ಗೆ ಸ್ವತಃ ಕಾಮೆಂಟ್ ಮಾಡಿರುವ ಮಹೇಶ್ ಬಾಬು ಪೋಕರಿ ಸಿನಿಮಾದ ಸಂಭಾಷಣೆಯನ್ನು ಉಲ್ಲೇಖಿಸಿದ್ದಾರೆ. (ಒಕ್ಕಸಾರಿ ಕಮಿಟ್ ಐತೆ ನಾ ಮಾಟ ನೆನೆ ವಿನನು) ಎಂದು ಹೇಳಿರುವ ಮಹೇಶ್ ಬಾಬು. ನಾನು ಒಮ್ಮೆ ಒಪ್ಪಿಗೆ ನೀಡಿದರೆ, ನನ್ನ ಮಾತನ್ನು ನಾನು ಕೇಳುವುದಿಲ್ಲ ಎಂದು ಹೇಳುವ ಮೂಲಕ ಸಿನಿಮಾಗೆ ತಮ್ಮ ಕಮಿಟ್ಮೆಂಟ್ ತೋರಿಸಿದ್ದಾರೆ.
ಸಿಂಹಕ್ಕೂ, ಮಹೇಶ್ ಬಾಬುಗೆ ಏನು ಸಂಬಂಧ !
ನಟ ಮಹೇಶ್ ಬಾಬುಗೆ ರೂಪಕವಾಗಿ ಸಿಂಹ ಎಂದು ಕರೆಯುವುದುಂಟು. ಅವರು ಡಿಸ್ನಿಯಲ್ಲಿ ಪ್ರಸಾರವಾಗುತ್ತಿದ್ದ ‘ ದಿ ಲಯನ್ ಕಿಂಗ್’ನ ತೆಲುಗು ಆವೃತ್ತಿಗೆ ಧ್ವನಿ ನೀಡಿದ್ದರು. ಇದಾದ ನಂತರ ಅವರಿಗೆ ಅಭಿಮಾನಿಗಳು ಈ ಬಿರುದು ನೀಡಿದ್ದರು.