Wednesday, January 29, 2025

ಮೈಕ್ರೋ ಫೈನಾನ್ಸ್​ ಕಿರುಕುಳ : ತುಂಗಭದ್ರಾ ನದಿಗೆ ಹಾರಿ ಶಿಕ್ಷಕಿ ಸಾ*ವು !

ದಾವಣಗೆರೆ : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್​ಗಳು ನೀಡುವ ಕಿರುಕುಳ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ದಾವಣಗೆರೆಯಲ್ಲು ಶಿಕ್ಷಕಿಯೊಬ್ಬರು ಮೈಕ್ರೋ ಫೈನಾನ್ಸ್​ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಹೌದು.. ಮೈಕ್ರೋ ಫೈನಾನ್ಸ್​ಗಳಿಂದ ನಡೆಯುತ್ತಿರುವ ಕಿರುಕುಳವನ್ನು ತಡೆಯಲು ರಾಜ್ಯ ಸರ್ಕಾರ ಇತ್ತೀಚೆಗೆ ಕೆಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆದರೂ ಕೂಡ ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ಏನಿದು ಘಟನೆ ?

ದಾವಣಗೆರೆಯ ಹೊನ್ನಾಳಿ ಪಟ್ಟಣದ ಪುಷ್ಪಲತಾ ಎಂಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊನ್ನಾಳಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದ ಪುಷ್ಪಲತಾ ಮನೆ ಕಟ್ಟಲು  ಶಿವಮೊಗ್ಗ ಮೂಲದ ಖಾಸಗಿ ಮೈಕ್ರೋ ಫೈನಾನ್ಸ್​ನಿಂದ ಸಾಲ ಪಡೆದಿದ್ದರು. ಸಾಲ ಹಿಂತಿರುಗಿಸದ ಪುಷ್ಪಲತಾ ವಿರುದ್ದ ಕಳೆದ 20 ದಿನಗಳ ಹಿಂದೆ ಫೈನಾನ್ಸ್​ ಕಂಪನಿ ಹೊನ್ನಾಳಿ ಪೊಲೀಸ್​ ಠಾಣೆಗೆ ದೂರನ್ನು ನೀಡಿದ್ದರು.

ಇದನ್ನೂ ಓದಿ : ರಾಜಧಾನಿಯಲ್ಲಿ ಭೀಕರ ಅಗ್ನಿ ದುರಂತ : 30ಕ್ಕೂ ಹೆಚ್ಚು ಬೈಕ್​ಗಳು ಬೆಂಕಿಗಾಹುತಿ !

ಪುಷ್ಪಲತಾರನ್ನು ಪೊಲೀಸ್​ ಠಾಣೆಗೆ ಕರೆಸಿಕೊಂಡಿದ್ದ ಪೊಲೀಸರು ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಕಳುಹಿಸಿದ್ದರು. ಇವೆಲ್ಲದರಿಂದ ಬೇಸತ್ತಿದ್ದ ಪುಷ್ಪಲತಾ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ನದಿಯ ದಡದಲ್ಲಿ ಕುಳಿತು ಯೋಚಿಸಿರುವ ಸಿಸಿಟಿವಿ ವಿಡಿಯೋ ಲಭ್ಯವಾಗಿದ್ದು. ಆಳವಾಗಿ ಯೋಚಿಸಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಮಹಿಳೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧಕಾರ್ಯ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES