Tuesday, January 28, 2025

ಥೈಲ್ಯಾಂಡ್​ ಯುವತಿಯನ್ನು ಕರೆತಂದು ಹೈಟೆಕ್​ ವೇಶ್ಯಾವಾಟಿಕೆ : ಪೊಲೀಸರ ಬಳಿ ‘ಬಿಸಿನೆಸ್’​ ಎಂದ ಯುವತಿ !

ಮೈಸೂರು : ಜಿಲ್ಲೆಯಲ್ಲಿ ಹೈಟೆಕ್​ ವೇಶ್ಯಾವಾಟಿಕೆ ಅಡ್ಡೆ ಮೇಲೆ ಪೋಲಿಸರು ದಾಳಿ ನಡೆಸಿದ್ದು. ದಾಳಿ ವೇಳೆ ಥೈಲ್ಯಾಂಡ್​ನಿಂದ ಯುವತಿಯನ್ನುನ ಕರೆತಂದು ವೇಶ್ಯಾವಾಟಿಕೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ದಾಳಿ ವೇಳೆ ಮಾಜಿ KSRTC ಉದ್ಯೋಗಿ ಸೇರಿ ಹಲವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಮೈಸೂರಿನ ಬೋಗಾದಿ ರಿಂಗ್ ರಸ್ತೆಯ ಈಗಲ್ ಪ್ಯಾಂಟಸಿ ಮೇಲೆ ಒಡನಾಡಿ ಸೇವಾ ಸಂಸ್ಥೆ, ಸರಸ್ಪತಿಪುರಂ ಪೊಲೀಸರು ಜಂಟಿ ಕಾರ್ಯಚರಣೆ ನಡೆಸಿ ಹೈಟೆಕ್ ವೇಶ್ಯಾವಾಟಿಕೆಯನ್ನ ಬೇದಿಸಿದ್ದಾರೆ. ಕಾರ್ಯಚರಣೆ ವೇಳೆ ಥೈಲ್ಯಾಂಡ್ ನಿಂದ ಯುವತಿಯನ್ನ ಕರೆತಂದು ವೇಶ್ಯಾವಾಟಿಕೆಗೆ ನಡೆಸುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಹತ್ತಿರ ಬಂದೇ ಬಿಡ್ತು ಕಿಚ್ಚ -ದಚ್ಚು ಒಂದಾಗೋ ಕಾಲ : ವಿನೀಶ್​ ಕೊಟ್ಟ ಸಿಗ್ನಲ್​ ಏನು ಗೊತ್ತಾ ?

ಇನ್ನೂ, ರತನ್ ಅನ್ನೋವಾತ ಕೆಎಸ್​ಆರ್​ಟಿಸಿಯಲ್ಲಿ ಉದ್ಯೋಗ ಪಡೆದಿದ್ದ ಅನ್ನೋ ಮಾಹಿತಿ ಲಭ್ಯವಾಗಿದೆ. ಆದರೆ ಉದ್ಯೋಗ ಬಿಟ್ಟು ವೇಶ್ಯಾವಾಟಿಕೆಗೆ ದಂಧೆಗೆ ರತನ್ ಇಳಿದಿದ್ದ ಎನ್ನಲಾಗಿದೆ. ಸುಲಭ ರೀತಿಯಲ್ಲಿ ಹಣ ಮಾಡೋಕೆ ಇಳಿದ ದಂಧೆ ಕೋರರು ಥೈಲ್ಯಾಂಡ್ ನಿಂದ ವೇಶ್ಯಾವಾಟಿಕೆಗೆ ಸುಂದರ ಯುವತಿಯನ್ನ ಕರೆದಂತು ವೇಶ್ಯಾವಾಟಿಕೆಗೆ ದೂಡಿರೋ ವಿಚಾರ ಬೆಳಕಿಗೆ ಬಂದಿದೆ. ವೇಶ್ಯಾವಾಟಿಕೆಯಲ್ಲಿ ರಕ್ಷಣೆಗೆ ಒಳಗಾದ ಥೈಲ್ಯಾಂಡ್ ಯುವತಿ ತಾನು ಬ್ಯುಸಿನೆಸ್​ಗೆ ಬಂದಿರೋದಾಗಿ ಹೇಳಿಕೊಂಡಿದ್ದಾಳೆ. ಥೈಲ್ಯಾಂಡ್ ಯುವತಿ ಜೊತೆ ಇದ್ದ ಮತ್ತೊಂದು ಯುವತಿಯನ್ನೂ ಕೂಡ ರಕ್ಷಣೆ ಮಾಡಿದ್ದಾರೆ.

ಒಟ್ಟಿನಲ್ಲಿ, ಮೈಸೂರಿನಲ್ಲಿ ದಿನೇ ದಿನೇ ವೇಶ್ಯಾವಾಟಿಕೆಗೆ ಜಾಲ ವಿಸ್ತರಣೆಯಾಗ್ತಿದೆ. ಕೂಡಲೇ ಪೊಲೀಸರು ಎಚ್ಚೆಚ್ಚು ವೇಶ್ಯಾವಾಟಿಕೆಗೆ ಜಾಲವನ್ನು ಬೇಧಿಸುವಲ್ಲಿ ಪೊಲೀಸರು ಎಚ್ಚರಿಕೆ ವಹಿಸಬೇಕಿದೆ.

 

RELATED ARTICLES

Related Articles

TRENDING ARTICLES