ಬೆಂಗಳೂರು : ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ರಾಜನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.
ನಗರದ ಯಲಹಂಕ ತಾಲೂಕಿನ ಹೊನ್ನೆನಹಳ್ಳಿ ಗೇಟ್ ಬಳಿ ಘಟನೆ ನಡೆದಿದ್ದು. ಘಟನೆಯಲ್ಲಿ ಪ್ರೆಸಿಡೆನ್ಸಿ ವಿವಿಯ ಬಿಬಿಎ ವಿದ್ಯಾರ್ಥಿ ತೇಜಸ್ ಮತ್ತು ಪವನ್ ಎಂಬವವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ : ‘ಹೆಂಡತಿ ನನ್ನ ಸಾ*ವು ನೋಡಲು ಬಯಸುತ್ತಿದ್ದಾಳೆ’ : ಡೆತ್ನೋಟ್ ಬರೆದಿಟ್ಟು ಗಂಡ ಆತ್ಮಹ*ತ್ಯೆ !
ಹಿಂದೂಪುರ ಮೂಲದ ತೇಜಸ್ ಇಂದು ಬೆಳಿಗ್ಗೆ ಕಾಲೇಜಿಗೆ ತೆರಳುತ್ತಿದ್ದ, ಅದೇ ರೀತಿ ವಿಶ್ವನಾಥಪುರ ಗ್ರಾಮದ ಪವನ್ ತನ್ನ ಬೈಕ್ನಲ್ಲಿ ಕೆಲಸಕ್ಕೆ ಎಂದು ತೆರಳುತ್ತಿದ್ದ. ಈ ವೇಳೆ ಎರಡು ಬೈಕ್ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು. ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ದೊರೆತಿದೆ.