ಪ್ರಯಾಗ್ ರಾಜ್ : ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿದ್ದು. ತ್ರೀವೇಣಿ ಸಂಗಮದಲ್ಲಿ ಪುಣ್ಯಸ್ನಾನ ಕೈಗೊಂಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಅಮಿತ್ ಶಾಗೆ ಉತ್ತರಪ್ರದೇಶ್ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಸಾತ್ ನೀಡಿದ್ದಾರೆ.
ಇಂದು(ಜ.27) ಬೆಳಿಗ್ಗೆ 11:30ರ ಸುಮಾರಿಗೆ ಉತ್ತರ ಪ್ರದೇಶದ ಬಮ್ರೌಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅಮಿತ್ ಶಾರನ್ನು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಸ್ವಾಗತಿಸಿದರು. ಅಲ್ಲಿಂದ ಕುಂಭಮೇಳೆ ನಡೆಯುತ್ತಿರುವ ಸ್ಥಳಕ್ಕೆ ತೆರಳಿದರು.
ಅಲ್ಲಿಂದ ಸ್ಟೀಮರ್ ಮೂಲಕ ತ್ರಿವೇಣಿ ಸಂಗಮಕ್ಕೆ ತೆರಳಿದ ಅಮಿತ್ ಶಾ, ನದಿಯಲ್ಲಿ ಪುಣ್ಯ ಸ್ನಾನ ಕೈಗೊಂಡರು. ಈ ವೇಳೆ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಜುನಾ ಅಖಾರದ ಮಹಾಮಂಡಲೇಶ್ವರ ಅವಧೇಶಾನಂದ ಸೇರಿದಂತೆ ಅನೇಕ ಇತರ ಸಂತರು ಅಮಿತ್ ಶಾ ಜೊತೆ ನದಿಯಲ್ಲಿ ಪುಣ್ಯ ಸ್ನಾನ ಕೈಗೊಂಡರು.
ಇದನ್ನೂ ಓದಿ :ಶಿವಣ್ಣ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ಸಿಎಂ ಸಿದ್ದರಾಮಯ್ಯ !
ಮಹಾಕುಂಭಕ್ಕೆ ಬರುವ ಮೊದಲು, ಶಾ ಬರೆದರು – ನಾನು ಸಂಗಮದಲ್ಲಿ ಸ್ನಾನ ಮಾಡಲು ಉತ್ಸುಕನಾಗಿದ್ದೇನೆ. ಷಾ ಭೇಟಿಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಎಲ್ಲಾ ಘಾಟ್‌ಗಳಲ್ಲಿ ಬೋಟ್‌ಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿತ್ತು. ಲೇಟೆ ಹನುಮಾನ್ ದೇವಸ್ಥಾನದ ಪ್ರವೇಶವನ್ನು ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ.