Friday, January 24, 2025

ಸಾಲಗಾರರ ಕಾಟಕ್ಕೆ ಕಿಡ್ನಿ ಮಾರಿಕೊಂಡ ಮಹಿಳೆ : ಇಷ್ಟಕ್ಕು ಸಾಲದೆ ಮಕ್ಕಳ ಕಿಡ್ನಿ ಮಾರುವಂತೆ ಒತ್ತಡ !

ರಾಮನಗರ : ರಾಜ್ಯದಲ್ಲಿ ಸ್ವಸಹಾಯ ಗುಂಪುಗಳಿಂದ, ಮೈಕ್ರೋ ಫೈನಾನ್ಸ್​ಗಳಿಂದ ಸಾಲ ಪಡೆದಿರುವವರ ಗೋಳು ಕೇಳದ ಸ್ಥಿತಿಗೆ ತಲುಪಿದೆ. ಪ್ರತಿ ದಿನವು ಒಂದಿಲ್ಲ ಒಂದು ಕಡೆ ಸಾಲಗಾರರ ಒತ್ತಡಕ್ಕೆ ಜನರು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಮಹಿಳೆಯರು ತಮ್ಮ ಮಾಂಗಲ್ಯ ಸರವನ್ನು ಉಳಿಸುವಂತೆ ಸಿಎಂಗೆ ಪತ್ರ ಬರೆದು ಅಭಿಯಾನ ಆರಂಭಿಸಿದ್ದಾರೆ. ಇದರ ನಡುವೆ ರಾಮನಗರದ ಮಾಗಡಿಯಲ್ಲಿ ಮಹಿಳೆಯೊಬ್ಬರು ಸಾಲ ತೀರಿಸಲು ಕಿಡ್ನಿ ಮಾರಿರುವ ಘಟನೆ ಹೊರ ಬಂದಿದೆ.

ಮಾಗಡಿ ಪಟ್ಟಣದ ತಿರುಮಲೆ ಬಡಾವಣೆಯ ಗೀತಾ ಎಂಬ ಮಹಿಳೆಯಿಂದ ಕಿಡ್ನಿ ಮಾರಾಟ ಮಾಡಿದ್ದು. ಗಂಡನ ಅನಾರೋಗ್ಯ ಹಿನ್ನಲೆ ಚಿಕಿತ್ಸೆ ಕೊಡಿಸಲು ಎಂದು ಗೀತಾ ಮೀಟರ್ ಬಡ್ಡಿ ಮತ್ತು ಮೈಕ್ರೋ ಫೈನಾನ್ಸ್​ಗಳಿಂದ ಸಾಲ ಪಡೆದಿದ್ದರು. ಆದರೆ ಸರಿಯಾದ ಸಮಯಕ್ಕೆ ಸಾಲ ವಾಪಾಸ್​ ನೀಡುವಲ್ಲಿ ಮಹಿಳೆ ವಿಫಲವಾದರಿಂದ. ಸಾಲಗಾರರು ಪ್ರತಿದಿನವು ಮನೆ ಬಳಿಯಲ್ಲಿ ಬಂದು ಕಿರುಕುಳ ನೀಡುತ್ತಿದ್ದರು. ಈ ಕಿರುಕುಳವನ್ನು ಸಹಿಸದೆ ಮಹಿಳೆ ಕಳೆದ 2 ವರ್ಷದ ಹಿಂದೆ ತನ್ನ ಕಿಡ್ನಿಯನ್ನು 2.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು. ಈ ಘಟನೆ ಈಗ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಅಧರ್ಮದ ಜಗತ್ತನ್ನು ತೊರೆದು, ಸತ್ಯದ ಕಡೆ ಹೋಗುತ್ತಿದ್ದೇನೆ : ಪತ್ರ ಬರೆದಿಟ್ಟು ನಾಪತ್ತೆಯಾದ ವಿದ್ಯಾರ್ಥಿ !

ಇದೀಗ ಮತ್ತೆ ಮೀಟರ್​ ಬಡ್ಡಿ ದಂದೆ ಕೋರರು ಕಿರುಕುಳ ನೀಡಲು ಆರಂಭಿಸಿದ್ದು. ಸಾಲ ತೀರಿಸಲು ಮಕ್ಕಳ ಕಿಡ್ನಿ ಮಾರುವಂತೆ ಒತ್ತಡ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಬೇಸತ್ತಿರುವ ಮಹಿಳೆ ಮಾಗಡಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES