ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪತ್ನಿ ಆರತಿ ಅಹ್ಲಾವತ್ ಸುದೀರ್ಘ ಎರಡು ದಶಕಗಳ ದಾಂಪತ್ಯ ಜೀವನದ ನಂತರ ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎಂದು ಮಾಹಿತಿ ದೊರೆತಿದೆ. 2004ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಜೋಡಿ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದು, ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಆದರೆ ಇದರ ಬಗ್ಗೆ ಅಧಿಕೃತ ಹೇಳಿಕೆ ಹೊರಗೆ ಬರಬೇಕಿದೆ.
ವಿರೇಂದ್ರ ಸೆವ್ವಾಗ್ ಮತ್ತು ಆರತಿ ಇಬ್ಬರು ಪರಸ್ಪರ ಇನ್ಸ್ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇದು ಇವರಿಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಬಂದಿದೆ ಎಂದು ಶಂಕಿಸಲು ಕಾರಣವಾಗಿದೆ. ಜೊತೆಗೆ ಸೆವ್ವಾಗ್ ಮತ್ತು ಆರತಿ ಇಬ್ಬರು ಕಳೆದ ಕೆಲ ತಿಂಗಳಿಂದ ದೂರ ವಾಸಿಸುತ್ತಿದ್ದಾರೆ ಎಂದು ಇವರ ಕುಟುಂಬದ ಮೂಲಗಳು ಬಹಿರಂಗಪಡಿಸಿದ್ದು. ಈ ಊಹಾಪೋಹಗಳು ಬಲಗೊಳ್ಳಲು ಮತ್ತಷ್ಟು ಪುಷ್ಟಿಯನ್ನು ತುಂಬಿದೆ.
ಇದನ್ನೂ ಓದಿ :ಬೆಂಗಳೂರಲ್ಲಿ ಬಾಂಗ್ಲಾ ಮಹಿಳೆಯ ಭೀಕರ ರೇಪ್ & ಮರ್ಡರ್ !
ಜೊತೆಗೆ ಕಳೆದ ವರ್ಷ ದೀಪಾವಳಿ ವೇಳೆಯಲ್ಲಿ ವಿರೇಂದ್ರ ಸೆವ್ವಾಗ ದೀಪಾವಳಿ ಪೋಸ್ಟ್ಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಪೋಟೊದಲ್ಲಿ ಸೆಹ್ವಾಗ್ ಜೊತೆ ಅವರ ಪುತ್ರರು ಮತ್ತು ಅವರ ತಾಯಿ ಇದ್ದರು. ಈ ವೇಳೆ ಆರತಿಯ ಅನುಪಸ್ಥಿತಿ ವಂದತಿ ಹಬ್ಬಲು ಕಾರಣವಾಗಿತ್ತು.