Friday, January 24, 2025

ಕಾರ್ಮಿಕರ ಮೇಲೆ ಹಲ್ಲೆ ಪ್ರಕರಣ : ದೂರವಾಣಿ ಕರೆ ಮೂಲಕ ಸಾಂತ್ವಾನ ಹೇಳಿದ ಸಿಎಂ !

ವಿಜಯಪುರ : ಮೂವರು ಕಾರ್ಮಿಕರ ಮೇಲೆ ಅಮಾನುಷ ಹಲ್ಲೆ ಪ್ರಕರಣ ರಾಜ್ಯದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಕಾರ್ಮಿಕರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿದ್ದು. ಹಲ್ಲೆಗೊಳಗಾದ ಕಾರ್ಮಿಕರಿಗೆ ಸಾಂತ್ವಾನ ಹೇಳಿದ್ದಾರೆ.

ವಿಜಯಪುರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಹೆಚ್​.ಆಂಜನೇಯ, ಕಾರ್ಮಿಕರ ಆರೋಗ್ಯ ವಿಚಾರಿಸಿದರು. ಈ ವೇಳೆ ತಮ್ಮ ಮೊಬೈಲ್​ನಿಂದಲೆ ಸಿಎಂ. ಸಿದ್ದರಾಮಯ್ಯಗೆ ಕರೆ ಮಾಡಿದ ಆಂಜನೇಯ. ಕಾರ್ಮಿಕರು ಮತ್ತು ಸಿದ್ದರಾಮಯ್ಯರ ಜೊತೆ ಮಾತನಾಡಿಸಿದರು. ಈ ವೇಳೆ ಕಾರ್ಮಿಕರು ತಮ್ಮ ಅಳಲನ್ನು ಸಿಎಂ ಎದುರಿಗೆ ತೋಡಿಕೊಂಡರು.

ಇದನ್ನೂ ಓದಿ : ರಸ್ತೆಯಲ್ಲಿ ಪ್ರತ್ಯಕ್ಷರಾದ ಯಮ ಮತ್ತು ಚಿತ್ರಗುಪ್ತ : ಹೆಲ್ಮೆಟ್​ ಧರಿಸುವಂತೆ ಸೂಚನೆ !

ಮುಂದುವರಿದು ಮಾತನಾಡಿದ ಕಾರ್ಮಿಕರು ‘ನಾವು ಜಮಖಂಡಿ ತಾಲೂಕಿನವರು ವಿಜಯಪುರಕ್ಕೆ ಕೂಲಿ ಕೆಲಸಕ್ಕೆ ಬಂದಿದ್ವೀವಿ ಸರ್. ಖೇಮು ರಾಠೋಡ ಇಟ್ಟಂಗಿ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದೆವು. ಹದಿನೈದು ಜನರು ನಮ್ಮನ್ನು ಕೂಡಿ ಹಾಕಿ ಹಲ್ಲೆ ಮಾಡಿದ್ದಾರೆ. ಅವರೆಲ್ಲರಿಗೂ ಶಿಕ್ಷೆ ಆಗಬೇಕು ಎಂದು ಕೇಳಿಕೊಂಡರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಮಾಜಿ ಸಚಿವ ಆಂಜನೇಯರಿಗೆ ಎಲ್ಲಾ ವಿಶಯವನ್ನು ತಿಳಿದುಕೊಂಡು ಬರುವಂತೆ ಸೂಚಿಸಿದರು.

ಘಟನೆ ಸಂಬಂಧ ಈಗಾಗಲೇ 5 ಜನರನ್ನು ಬಂಧಿಸಿ ನ್ಯಾಯಂಗ ಬಂಧನಕ್ಕೆ ಕಳುಹಿಸಲಾಗಿದ್ದು. ಉಳಿದವರನ್ನು ಬಂಧಿಸಲು ಕಾರ್ಮಿಕರು ಆಗ್ರಹಿಸಿದ್ದಾರೆ. ಘಟನೆ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES