Friday, January 24, 2025

ಮಾದಪ್ಪನ ಹುಂಡಿಗೆ ಹರಿದು ಬಂತು ಭಾರಿ ಮೊತ್ತದ ಕಾಣಿಕೆ : ಎಷ್ಟು ಗೊತ್ತೇ !

ಚಾಮರಾಜನಗರ : ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗು ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಭಾರಿ ಮೊತ್ತದ ಹಣ ಸಂಗ್ರಹವಾಗಿದ್ದು. ಕೇವಲ 30 ದಿನಗಳಲ್ಲೆ 2.29 ಕೋಟಿ ಹಣ ಸಂಗ್ರಹವಾಗಿದೆ.

ಹುಂಡಿ ಎಣಿಕೆ ಬಗ್ಗೆ ದೇವಾಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದ್ದು. ಕೇವಲ 30 ದಿನಗಳಲ್ಲೆ 2.29 ಕೋಟಿಯಷ್ಟು ಹಣ ಸಂಗ್ರಹವಾಗಿದೆ. ಗುರುವಾರ (ಜ.23) ಮಲೆ ಮಹದೇಶ್ವರ ಬಸ್​ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ನಡೆದ ಎಣಿಕೆ ಕಾರ್ಯದಲ್ಲಿ ಈ ವಿಶಯ ತಿಳಿದು ಬಂದಿದೆ. ಅಮಾವಾಸ್ಯೆ ,ಹೊಸವರ್ಷ ಸರ್ಕಾರಿ ರಜಾ ದಿನ, ಶಬರಿಮಲೆ, ಓಂ ಶಕ್ತಿ ಯಾತ್ರಾರ್ಥಿಗಳ ಆಗಮನ ಸೇರಿದಂತೆ ಅನೇಕ ಕಾರಣಗಳಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಣಿಕೆ ಹಣ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಹೆತ್ತವರ ಜೊತೆ ಸಮಯ ಕಳೆಯಲು. ಏರ್​ಹೋಸ್ಟಸ್​ ಕೆಲಸ ತೊರೆದು, ಹಂದಿ ಸಾಕಾಣೆಗೆ ಇಳಿದ ಯುವತಿ !

ಸಿಸಿಟಿವಿ ಕಣ್ಣಾವಲಿನಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು. ಹರಕೆಯ ರೂಪದಲ್ಲಿ 2,29,67,216 ನಗದು 18 ಗ್ರಾಂ ಚಿನ್ನ ಹಾಗೂ 1,200ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ಹುಂಡಿಯಿಂದ 4,21,505 ರೂಪಾಯಿ ಮೊತ್ತದ ವಿದೇಶಿ ನೋಟುಗಳು ಸಹ ಸಂಗ್ರಹವಾಗಿದೆ. ಜೊತೆಗೆ ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 17 ನೋಟುಗಳು ಸಹ ಹುಂಡಿಯಲ್ಲಿ ಪತ್ತೆಯಾಗಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES