ಮಂಡ್ಯ : ಸವರ್ಣಿಯರ ಕಿರುಕುಳಕ್ಕೆ ಬೇಸತ್ತ ದಲಿತ ಕುಟುಂಬ ದಯಾಮರಣವನ್ನು ಕೋರಿ ಅರ್ಜಿ ಸಲ್ಲಿಸಿರುವ ಘಟನೆ ಮಂಡ್ಯದ ಕೆ.ಆರ್ ಪೇಟೆಯಲ್ಲಿ ನಡೆದಿದ್ದು. ರಾಮಸ್ವಾಮಿ ಎಂಬುವವರು ಜಿಲ್ಲಾಡಳಿತದ ಮುಂದೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಮಂಡ್ಯದ ಕೆ.ಆರ್.ಪೇಟೆ ತಾಲ್ಲೂಕು ತೆಂಡೆಕೆರೆ ಗ್ರಾಮದಲ್ಲಿರುವ ದಲಿತ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದು. ಮೂಲತಃ ಚಾಮರಾಜನಗರದ ಹನೂರು ತಾಲ್ಲೂಕಿನ ಬಿ.ಜಿ ಪಾಳ್ಯದ ರಾಮಸ್ವಾಮಿ ಕುಟುಂಬದರವು ಕಳೆದ 38 ವರ್ಷಗಳ ಹಿಂದೆ ಕೆ,ಆರ್ ಪೇಟೆಯ ತೆಂಡಕೆರೆಗೆ ಬಂದು ನೆಲೆಸಿದ್ದರು.
ಇದನ್ನೂ ಓದಿ :ಸಾಲಗಾರರ ಕಾಟಕ್ಕೆ ಕಿಡ್ನಿ ಮಾರಿಕೊಂಡ ಮಹಿಳೆ : ಇಷ್ಟಕ್ಕು ಸಾಲದೆ ಮಕ್ಕಳ ಕಿಡ್ನಿ ಮಾರುವಂತೆ ಒತ್ತಡ !
ಆದರೆ ದಲಿತ ಕುಟುಂಬ ಎಂಬ ಒಂದೆ ಕಾರಣಕ್ಕೆ ಇವರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದು. ಇವರ ಮನೆಗೆ ತೆರಳುವ ರಸ್ತೆಗೆ ಮಲಮೂತ್ರದ ಕೊಳಚೆ ನೀರನ್ನು ಹರಿಸಿದ್ದಾರೆ. ಜೊತೆಗೆ ಇಡಿ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಗ್ರಾಮದ ಹಬ್ಬದಲ್ಲಿ ನಡೆಯುವ ದೇವರ ಉತ್ಸವಕ್ಕೂ ಬಹಿಷ್ಕಾರ ಹಾಕಿದ್ದು. ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿಗಳು ಮತ್ತು ತಾಲ್ಲೂಕಾಧಿಕಾರಿಗಳಿಗೆ ದೂರು ನೀಡಿದ್ದರು ಸಮಸ್ಯೆ ಬಗೆಹರಿದಿಲ್ಲ ಎಂದು ದಲಿತ ಕುಟುಂಬ ತಮ್ಮ ಅಳಲನ್ನು ನೋಡಿಕೊಂಡಿದ್ದು. ದಯಾಮರಣ ನೀಡಿ ಎಂದು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ.