ದೆಹಲಿ : ಇತ್ತೀಚೆಗೆ ಪ್ರಾಚ್ಯವಸ್ತು ವಿಶೇಷ ಸಂಗ್ರಹಣೆಯಲ್ಲಿ ರಾಜ್ಯಾದ್ಯಂತ ಸದ್ದು ಮಾಡಿದ್ದ ಲಕ್ಕುಂಡಿ ಗ್ರಾಮದ ಬ್ರಹ್ಮ ಜಿನಾಲಯ ಜನವರಿ 26 ರಂದು ದೆಹಲಿ ಗಣರಾಜ್ಯೋತ್ಸವದ ಪರೇಡ್‌ಗೆ ಆಯ್ಕೆ ಆಗಿದೆ.
ಹೌದು.. ಈ ಸಲದ ಗಣರಾಜ್ಯೋತ್ಸವಕ್ಕೆ ಶಿಲ್ಪ ಕಲೆಯ ತೊಟ್ಟಿಲು ಎಂಬ ಶೀರ್ಷಿಕೆ ಅಡಿಯಲ್ಲಿ ಸಿದ್ಧವಾಗಿರುವ ಲಕ್ಕುಂಡಿ ಉತ್ಸವ ಸ್ತಬ್ಧ ಚಿತ್ರದ ಅಂತಿಮ ಸಿದ್ದತೆಗಳನ್ನು ದೆಹಲಿಯ ರಂಗಶಾಲೆಯಲ್ಲಿ ನಡೆಸಲಾಗ್ತಿದೆ. ಈ ಸ್ತಬ್ದ ಚಿತ್ರ ಸರ್ವ ಜನಾಂಗದ ಶಾಂತಿಯ ತೋಟದ ಪ್ರತೀಕವಾಗಿದೆ. ಲಕ್ಕುಂಡಿಯ ಶಿಲ್ಪ ಕಲೆಯು ಐತಿಹಾಸಿಕ ದೇವಾಲಯಗಳಿಂದಾಗಿ ದೇಶದ ಜನರನ್ನು ಕರ್ತವ್ಯ ಪಥ್ ನಲ್ಲಿ ಮಂತ್ರ ಮುಗ್ದರನ್ನಾಗಿಸಲು ಹೊರಟಿದೆ.
ಇದನ್ನೂ ಓದಿ: ವಿಪರೀತ ಸಾಲ : ಬ್ರಿಡ್ಜ್ಗೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ ಮಾಡಿಕೊಂಡ ವೃದ್ದ ದಂಪತಿಗಳು !
ಕಳೆದ ಎರಡು ವರ್ಷದಿಂದ ಕರ್ನಾಟಕದಿಂದ ಯಾವುದೇ ಟ್ಯಾಬ್ಲೋ ಗಣರಾಜ್ಯೋತ್ಸವದ ಪರೇಡ್‌ಗೆ ಆಯ್ಕೆ ಆಗಿರಲಿಲ್ಲ. ಈ ವರ್ಷ ಲಕ್ಕುಂಡಿ ಬ್ರಹ್ಮ ಜಿನಾಲಯ ಸ್ತಬ್ಧ ಚಿತ್ರಕ್ಕೆ ಆಯ್ಕೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ದೆಹಲಿಯಲ್ಲಿ ಟ್ಯಾಬ್ಲೋ ನಿರ್ಮಾಣವಾಗಿದ್ದು. ಗಣರಾಜ್ಯೋತ್ಸವದ ದಿನ ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರದ ಮುಂದೆ ಪ್ರದರ್ಶನಗೊಳ್ಳಲಿದೆ.