Thursday, January 23, 2025

ಮೈಕ್ರೊ ಫೈನಾನ್ಸ್​ ಕಿರುಕುಳ : ಸಿಎಂಗೆ ಮಾಂಗಲ್ಯ ಸರ ಕಳುಹಿಸಿ ಪ್ರತಿಭಟಿಸಿದ ಮಹಿಳೆಯರು

ಹಾವೇರಿ: ಗ್ಯಾರಂಟಿ ಭಾಗ್ಯಗಳ ಬಗ್ಗೆ ಬೆನ್ನು ತಟ್ಟಿಕೊಳ್ಳುವ ಕಾಂಗ್ರೆಸ್ ಸರ್ಕಾರ ಮಹಿಳೆಯರ ಮಾಂಗಲ್ಯ ಭಾಗ್ಯಕ್ಕೆ ಕುತ್ತು ಬಂದಿದ್ದರೂ ಕಣ್ಣು ಮುಚ್ಚಿ ಕುಳಿತಿದೆ. ಈ ನೆಲದ ಹೆಣ್ಣು ತನಗೆ ಯಾವ ಭಾಗ್ಯ ಕೊಡದಿದ್ದರು ಚಿಂತೆ ಇಲ್ಲ ಉಸಿರಿರುವ ತನಕ ಮಾಂಗಲ್ಯ ಭಾಗ್ಯ ಉಳಿಸು ಎಂದು ದೇವಾನುದೇವತೆಗಳಲ್ಲಿ ಪ್ರಾರ್ಥಿಸುತ್ತಾಳೆ. ಅದರೆ ಹಾವೇರಿ ಮೈಕ್ರೋಫೈನಾನ್ಸ್ ಕಾಟಕ್ಕೆ ಬೇಸತ್ತಿ ಮಹಿಳೆಯರು ಸಿಎಂಗೆ ಮಾಂಗಲ್ಯ ಉಳಿಸಿ ಅಭಿಯಾನ ನಡೆಸಿದ್ದಾರೆ.

ಕಳೇದ ಎರಡು ಮೂರು ತಿಂಗಳಿಂದ ಹಾವೇರಿ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಮಹಿಳೆಯರು ಸಾಲದ ಕಂತು ಕಟ್ಟುವ ವಿಚಾರವಾಗಿ ಮೈಕ್ರೋಫೈನಾನ್ಸ್ ಸಿಬ್ಬಂದಿಗಳ ಕಾಟದಿಂದ ಬೇಸತ್ತು ಊರಿಗೆ ಊರಿಗೆ ಬಿಟ್ಟು ಹೋಗಿದ್ದಾರೆ. ಮತ್ತೊಂದಡೆ ಇದೀಗಾ ಮಾಂಗಲ್ಯ ಉಳಿಸಿ ಅಭಿಯಾನ ನಡೆಸುತ್ತಾದ್ದರೆ.

ಇದನ್ನೂ ಓದಿ: ಏನೂ ಅರಿಯದ ಕಂದಮ್ಮನನ್ನು ಕೊ*ಲೆ ಮಾಡಿ, ಫಿಟ್ಸ್​ ನಾಟಕವಾಡಿದ್ದ ಮಲತಾಯಿ ಅಂದರ್​ !

ಹಾವೇರಿ ಜಿಲ್ಲೆಯ ನೊಂದ ಮಹಿಳೆಯರು ಹಾಗೂ ರೈತ ಮುಖಂಡರು ‘ಮಾಂಗಲ್ಯ ಸರ ಉಳಿಸಿ’ ಎಂಬ ಅಭಿಯಾನ ಆರಂಭಿಸಿದ್ದಾರೆ. ಹಾವೇರಿ ನಗರದ ಅಂಚೆ ಕಚೇರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಂಗಲ್ಯ ಸರವನ್ನೇ ರವಾನಿಸಿದ್ದಾರೆ. ಜಿಲ್ಲೆಯ ನೊಂದ ನೂರಾರು ಮಹಿಳೆಯರು ಮೈಕ್ರೋ ಫೈನಾನ್ಸ್ ಕಂಪನಿಗಳು ಮನೆ ಬಾಗಿಲಿಗೆ ಬಂದು ಕಿರುಕುಳ ನೀಡುತ್ತಿದ್ದಾರೆ. ಮನೆಯಲ್ಲಿ ನೆಮ್ಮದಿಯಾಗಿ ಇರುವಂತಿಲ್ಲ.
ಮನೆಗೆ ಬಂದರೆ ಇವರ ಕಿರುಕುಳ, ಇವರು ಬಂದರೆ ಸುತ್ತಮುತ್ತಲಿನವರ ಕೇಳುವಂತಾಗಿದೆ. ಹೀಗಾಗಿ ಕಿರುಕುಳ ತಪ್ಪಿಸಿ, ಮಾಂಗಲ್ಯ ಉಳಿಸಿ ಎಂದು ಮಹಿಳೆಯರು ಒತ್ತಾಯಿಸಿದ್ದಾರೆ.

ಎಸಿ ಕಚೇರಿಗೆ ಹಾಗೂ ಜಿಲ್ಲಾಡಳಿತ ಹಾಗೂ ಎಸ್ಪಿ ಕಚೇರಿಗೆ ಮಹಿಳೆಯರು ಮೈಕ್ರೋಫೈನಾನ್ಸ್ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಸ್ಪಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಸರ್ಕಾರ ಈ ನೊಂದ ಮಹಿಳೆಯರ ಪಾಲಿಗೆ ಏಗೆ ಧ್ವನಿಯಾಗಿ ನಿಲ್ಲುತ್ತೆ ಅನ್ನೋದನ್ನ‌ ಕಾದು‌ ನೋಡಬೇಕಿದೆ.

RELATED ARTICLES

Related Articles

TRENDING ARTICLES