Thursday, January 23, 2025

ಸಿನಿಮಾ ರಂಗಕ್ಕೆ ನಿವೃತ್ತಿ ಘೋಷಿಸಲಿದ್ದಾರಾ ರಶ್ಮಿಕಾ : ಛಾವಾ ಟ್ರೈಲರ್​ ಈವೆಂಟ್​ನಲ್ಲಿ ಹೇಳಿದ್ದೇನು ?

ಐತಿಹಾಸಿಕ ಸಿನಿಮಾ ಛಾವಾದಲ್ಲಿ ಮರಾಠಾ ರಾಣಿ ಯೇಸುಬಾಯಿ ಭೋನ್ಸಾಲೆ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರು ವಿಕ್ಕಿ ಕೌಶಲ್ ಅವರೊಂದಿಗೆ ನಟಿಸಿದ್ದಾರೆ . ಚಿತ್ರದ ಟ್ರೇಲರ್ ಜನವರಿ 22 ಮುಂಬೈನ ಪ್ಲಾಜಾ ಥಿಯೇಟರ್‌ನಲ್ಲಿ ಚಿತ್ರತಂಡ ಬಿಡುಗಡೆ ಮಾಡುಗಡೆ ಮಾಡಿದೆ.

ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ರಶ್ಮಿಕಾ, ಅವಕಾಶಕ್ಕಾಗಿ ಚಿತ್ರತಂಡಕ್ಕೆ ಧನ್ಯವಾದ ಹೇಳಿದರು. ಅವರಿಗೆ ಈ ಪಾತ್ರ ಮಾಡಿ ತೃಪ್ತಿ ಆಗಿದೆ. ಅದೊಂದು ಗೌರವ. ದಕ್ಷಿಣದಿಂದ ಬಂದು ಮಹಾರಾಣಿ ಯೇಸುಬಾಯಿ ಪಾತ್ರವನ್ನು ಮಾಡಿದ್ದೇನೆ. ಇದು ನನ್ನ ಜೀವಿತಾವಧಿಯಲ್ಲಿ ಮಾಡಿದ ವಿಶೇಷ ಕೆಲಸ. ಈ ಸಿನಿಮಾ ಬಳಿಕ ನಿವೃತ್ತಿ ಹೊಂದಲು ನನಗೆ ಖುಷಿ ಇದೆ ಎಂದು ರಶ್ಮಿಕಾ ಅವರು ನಿರ್ದೇಶಕ ಲಕ್ಷ್ಮಣ್ ಅವರಿಗೆ ಹೇಳಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಕಿರುಕುಳದ ಆರೋಪ : ಗೃಹಿಣಿ ಆತ್ಮಹ*ತ್ಯೆ !

ನಾನು ಅಳುತ್ತಾ ಕೂರುವ ವ್ಯಕ್ತಿ ಅಲ್ಲ. ಆದರೆ, ಈ ಟ್ರೇಲರ್​ನ ನನ್ನನ್ನು ಪ್ರಚೋದಿಸಿತು. ವಿಕ್ಕಿ ಕೌಶಲ್ ದೇವರ ರೀತಿ ಕಾಣುತ್ತಿದ್ದಾರೆ. ಅವರು ಛಾವಾ’ ಎಂದು ರಶ್ಮಿಕಾ ಮಂದಣ್ಣ ಅವರು ಟ್ರೇಲರ್ ಲಾಂಚ್ ಈವೆಂಟ್​ನಲ್ಲಿ ಹೇಳಿದ್ದಾರೆ. ವಿಕ್ಕಿ ಕೌಶಾಲ್ ನಾಯಕನ ನಟನಾಗಿ ಕಾಣಿಸಿಕೊಂಡಿರುವ ಈ ಚಿತ್ರವನ್ನು ಲಕ್ಷ್ಮಣ್ ಉಟೇಕರ್ ನಿರ್ದೇಶಿಸುತ್ತಿದ್ದಾರೆ. ಛಾವಾ ಚಿತ್ರದ ಪೋಸ್ಟ್ ಬಿಡುಗಡೆ ಬೆನ್ನಲ್ಲೇ ಇದೀಗ ಟ್ರೈಲರ್ ಲಾಂಚ್ ಆಗಿದೆ. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಭಾವುಕರಾಗಿದ್ದಾರೆ.

ಒಟ್ಟಾರೆಯಾಗಿ ರಷ್ಮಿಕಾ ಅವರ ಜೀವನದಲ್ಲಿ ಛಾವ ಸಿನಿಮಾ ಮತ್ತೊಂದು ಮೈಲುಗಲ್ಲನ್ನು ಕಲ್ಪಿಸಿದ್ದು. ಈ ಸಿನಿಮಾದಲ್ಲಿ ನಟಿಸಿರುವ ರಶ್ಮಿಕಾ ತಮ್ಮ ಸಿನಿ ಜೀವನದಲ್ಲಿ ಈ ರೀತಿಯ ಪಾತ್ರ ಮಾಡಿರುವುದು ಸಾರ್ಥಕತೆಯ ಸಂಕೇತವೆಂದು ಭಾವಿಸಿ ಸಿನಿ ರಂಗದಿಂದ ನಿವೃತ್ತಿ ಆದರು ಪರವಾಗಿಲ್ಲ ಎಂದು ಹೇಳಿದ್ದಾರೆ.

 

RELATED ARTICLES

Related Articles

TRENDING ARTICLES