ಬೆಂಗಳೂರು : ಬಿಪಿ ಹರೀಶ್ ಹೇಳಿಕೆ ಕುರಿತು ಮಾತನಾಡಿದ ಮಾಜಿ ಶಾಸಕ ರೇಣುಕಾಚಾರ್ಯ ಬಿಪಿ ಹರೀಶ್ ಮೇಲೆ ಗರಂ ಆಗಿದ್ದು, ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ರೇಣುಕಾಚಾರ್ಯ ‘ ಬಿಪಿ ಹರೀಶ್ ಬಹಳ ಮರ್ಯಾದಸ್ಥ, 2018ರಲ್ಲಿ ಸೋತು ಬಂದು ನಮ್ಮ ಮನೇಲಿ ಕುಳಿತುಕೊಂಡಿದ್ದೆ. ಆಗ ಮಾತ್ರ ನಾವು ಬೇಕಾಗಿತ್ತು. ನೀನು ಬಳಸುತ್ತಿರುವ ಭಾಷೆಗಿಂತ ಹೆಚ್ಚು ನಾನು ಮಾತನಾಡಬಲ್ಲೆ, ನಿನೇನು ಸತ್ಯಹರಿಶ್ಚಂದ್ರ ಅಲ್ಲ. ಮರ್ಯಾಧ ಪುರುಷೋತ್ತಮ, ಆದರ್ಶ ಪುರುಷನು ಅಲ್ಲ. ನಿನ್ನೆ ಕ್ಷೇತ್ರಕ್ಕೆ ಬಂದು ನಿನ್ನನ್ನು ಗೆಲ್ಲಿಸಿ ಎಂದು ಹೇಳುತ್ತಿದ್ದೆ. ಜಿಲ್ಲೆಯ ಎಸ್ಪಿ, ಡಿಸಿಗೆ ಹೇಳಿ ನಿನ್ನ ಕ್ಷೇತ್ರದ ಕೆಲಸ ಮಾಡುತ್ತಿದ್ದೆ. ಸರ್ಕಾರಿ ವರ್ಗಾವಣೆಗಳನ್ನು ಮಾಡಿಕೊಟ್ಟಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ವಿವಾಹಿತ ಮಹಿಳೆಯೊಂದಿಗೆ ಮಾತನಾಡುತ್ತಿದ್ದ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಕುಟುಂಭಸ್ಥರು !
ಮುಂದುವರಿದು ಮಾತನಾಡಿದ ರೇಣುಕಾಚಾರ್ಯ ‘ ಬಿಪಿ ಹರೀಶ್ಗೂ ಸಿದ್ದೇಶ್ವರ್ಗೂ ಆಗ್ತಾ ಇರಲಿಲ್ಲ. 2014ರಲ್ಲಿ ಸಿದ್ದೇಶ್ವರ್ ಗೆಲ್ಲಬಾರದು ಎಂದು ನೀನೆ ಹೇಳಿದ್ದೆ. ಹೇಳಿಲ್ಲ ಎಂದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡು. ನಾನು ನಿನ್ನನ್ನು ಸುಮ್ಮನೆ ಬಿಡಲ್ಲ ಎಂದು ಸವಾಲು ಹಾಕಿದ್ದಾರೆ. ಜೊತೆಗೆ ಮತ್ತೊಮ್ಮೆ ನನ್ನ ಬಗ್ಗೆ ಮಾತನಾಡಿದರೆ ಸುಮ್ಮನೆ ಬಿಡಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.