ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಭೀಕರ ರೈಲು ದುರಂತ ಸಂಭಿವಿಸಿದ್ದು. ಜಲಂಘಾವ್ ರೈಲು ನಿಲ್ದಾಣದಲ್ಲಿ ನಿಂತಿದ್ದ ಪುಷ್ಕರ್ ರೈಲಿನಲ್ಲಿ ಬೆಂಕಿ ಬಿದ್ದಿದೆ ಎಂಬ ವಂದತಿಯಿಂದ ರೈಲಿನಲ್ಲಿದ್ದ ಜನರು ರೈಲಿನಿಂದ ಪಕ್ಕದ ಹಳಿ ಮೇಲೆ ಜಿಗಿದಿದ್ದರು. ಇದೇ ವೇಳೆಯಲ್ಲಿ ಆ ಹಳಿ ಮೇಲೆ ಕರ್ನಾಟಕ ಎಕ್ಸ್ಪ್ರೆಸ್ ವೇಗವಾಗಿ ಬಂದಿದ್ದು. ಹಳಿ ಮೇಲಿದ್ದ ಪ್ರಯಾಣಿಕರಿಗೆ ಡಿಕ್ಕಿಯಾಗಿದೆ.
ಇದನ್ನೂ ಓದಿ : ಬೆಂ-ಮೈ ರಸ್ತೆಯಲ್ಲಿ ದರೋಡೆ ಆರೋಪ : ಗಾರೆ ಕೆಲಸದವರು ರಸ್ತೆ ದಾಟುತ್ತಿದ್ದರು ಎಂದ ಪೊಲೀಸರು !
ಈ ಭೀಕರ ರೈಲು ಅಪಘಾತದಲ್ಲಿ ಕನಿಷ್ಟ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಹೊರಬಂದಿದ್ದು. ಘಟನಾ ಸ್ಥಳಕ್ಕೆ ರೈಲ್ವೇ ಅಧಿಕಾರಿಗಳು ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಇನ್ನಷ್ಟೆ ಹೆಚ್ಚಿನ ಸುದ್ದಿ ದೊರೆಯಬೇಕಿದೆ.
ಘಟನೆ ಬಗ್ಗೆ ಸಂತಾಪ ಸೂಚಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಆದೇಶಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.