Wednesday, January 22, 2025

ವಿವಾಹಿತ ಮಹಿಳೆಯೊಂದಿಗೆ ಮಾತನಾಡುತ್ತಿದ್ದ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ ಕುಟುಂಬಸ್ಥರು !

ಹುಬ್ಬಳ್ಳಿ : ನಗರದಲ್ಲೊಂದು ಘನಘೋರ ಘಟನೆ‌ ನಡೆದಿದ್ದು. ವಿವಾಹಿತ ಮಹಿಳೆಯೊಂದಿಗೆ ಮಾತನಾಡಿದ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದಾರೆ. ಘಟನೆ ನಡೆದ ಕೂಗಳತೆ ದೂರದಲ್ಲೆ ಪೊಲೀಸ್​ ಠಾಣೆ ಇದ್ದರು ಕೂಡ ಹೆದರದೆ ಈ ಕೃತ್ಯ ಮಾಡಿದ್ದಾರೆ.

ಹುಬ್ಬಳ್ಳಿಯ ಕಸಬಾ ಪೇಟೆ ಪೊಲೀಸ್ ಠಾಣೆಯ ಪಕ್ಕದ ಟಿಪ್ಪು ನಗರದಲ್ಲಿ ಘಟನೆ ನಡೆದಿದ್ದು. ಮುಜಾಫರ್​ ಎಂಬ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದಾರೆ.

ಮುಜಾಫರ್​ ಎಂಬ ಯುವಕ ವಿವಾಹಿತ ಮಹಿಳೆಯೊಂದಿಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದನು. ಈ ವಿಷಯ ತಿಳಿದ ಮಹಿಳೆಯರ ಕುಟುಂಬಸ್ಥರು ಯುವಕನನ್ನು ಕಿಡ್ನಾಪ್​ ಮಾಡಿದ್ದಾರೆ. ಕಿಡ್ನಾಪ್​ ಮಾಡಿದ ನಂತರ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ್ದು. ಬಟ್ಟೆ ಬಿಚ್ಚಿಸಿ ಸಿಕ್ಕ ಸಿಕ್ಕಲ್ಲಿ ಯುವಕನಿಗೆ ಬ್ಲೇಡ್​ನಿಂದ ಕೂಯ್ದಿದ್ದಾರೆ. ನಂತರ ಯುವಕನನ್ನು ಬೆತ್ತಲೆಯಾಗಿ ಆತನ ಮನೆಗೆ ಬಿಟ್ಟಿದ್ದಾರೆ.

ಇದನ್ನೂ ಓದಿ: ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡೋದಕ್ಕೆ ನಾಯಕರಿಗೆ ತಾಖತ್​ ಇಲ್ಲ : ಜಿ.ಟಿ ದೇವೇಗೌಡ

ಹಾಡಹಗಲೇ ಹುಬ್ಬಳ್ಳಿಯಲ್ಲಿ ಈ ಘೋರ ಘಟನೆ ನಡೆದಿದ್ದು. ಗಾಯಗೊಂಡ ಮುಜಾಫೀರ್​ಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಿದೆ. ಸುಮಾರು 15 ಜನರಿಂದ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಿದ್ದು.  ಮೊಹಮದ್, ಮಾಬುಲಿ, ಮಲೀಕ್, ಮೈನು ಶಗರಿ , ನದೀಮ್, ಸಮೀರ್ ಸೇರಿ ಹತ್ತು ಹದಿನೈದು ಜನರಿಂದ  ಹಲ್ಲೆ‌ ನಡೆಸಲಾಗಿದೆ. ಕಸಬಾಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

 

RELATED ARTICLES

Related Articles

TRENDING ARTICLES