ಚಾಮರಾಜನಗರ : ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ಭಾರಿ ಗಾತ್ರದ ಗಜರಾಜನ ದರ್ಶನವಾಗಿದ್ದು. ಒಂಟಿ ಸಲಗವನ್ನು ನೋಡಿದ ಪ್ರವಾಸಿಗರು ಆನೆಯ ಗಾತ್ರಕ್ಕೆ ಮನಸೋತಿದ್ದಾರೆ. ಈ ದೃಷ್ಯಕ್ಕೆ ಮಲೆಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶ ಸಾಕ್ಷಿಯಾಗಿದೆ.
ಇದನ್ನೂ ಓದಿ : 20 ಟನ್ ತೂಕದ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಮಲ್ಲಿಕಾರ್ಜುನ್ ಖರ್ಗೆ !
ಹೌದು.. ಚಾಮರಾಜನಗರದ ಮಲೈ ಮಹದೇಶ್ವರ ವನ್ಯಜೀವಿ ವಿಭಾಗದ ಅಜ್ಜೀಪುರ ಸಫಾರಿಯಲ್ಲಿ ಒಂಟಿ ಸಲಗದ ದರ್ಶನವಾಗಿದೆ. ಸಫಾರಿಗೆ ಹೊರಟಿದ್ದ ಪ್ರವಾಸಿಗರ ವಾಹನವನ್ನು ಆನೆ ಹಿಂಭಾಲಿಸಿದ್ದು. ಆನೆಯನ್ನು ನೋಡಿದ ಪ್ರವಾಸಿಗರು ಕೆಲಕಾಲ ಗಾಬರಿಗೊಂಡರು, ಆದರೆ ನಂತರ ಆನೆಯ ರಾಜಗಾಂಭೀರ್ಯದ ನಡಿಗೆಯನ್ನು ನೋಡಿ ಸಂತಸಗೊಂಡು ಪೋಟೊಗಳನ್ನು ಕ್ಲಿಕ್ಕಿಸಿಕೊಂಡರು. ಒಟ್ಟಿನಲ್ಲಿ ಅಪರೂಪಕ್ಕೆ ಕಂಡು ಬರುವ ಬೆಟ್ಟದಾನೆಯನ್ನು ನೋಡಿ ಪ್ರವಾಸಿಗಳು ಸಂತಸಗೊಂಡಿದ್ದಾರೆ.