ರಾಜ್‌ಗಢ: ಬೆಂಗಳೂರಿನಲ್ಲಿ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದಂತೆ ಮತ್ತೊಂದು ಪ್ರಕರಣ ವರದಿಯಾಗಿದ್ದು. ಮಧ್ಯಪ್ರದೇಶದ ರಾಯಗಡ ಜಿಲ್ಲೆಯ 27 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ಅತ್ತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ದುರ್ದೈವಿಯನ್ನು 27 ವರ್ಷದ ರವಿ ಕಷ್ಯಪ್ ಎಂದು ಗುರುತಿಸಲಾಗಿದ್ದು. ಬಿಯೋರಾ ಪಟ್ಟಣದ ತಮ್ಮ ಮನೆಯಲ್ಲಿ ಫ್ಯಾನ್ ಸೀಲಿಂಗ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಇದನ್ನೂ ಓದಿ: ಕಾಡಾನೆ ಹಾವಳಿಗೆ ತತ್ತರಿಸಿದ ಹಾಸನ ಜನತೆ : ಜೀವ ಭಯದಲ್ಲಿ ಬದುಕುತ್ತಿರುವ ಜನ !
ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಕಷ್ಯಪ್ ತನ್ನ ಮೊಬೈಲ್ನಲ್ಲಿ ವಿಡಿಯೋವನ್ನು ಚಿತ್ರಿಕರಿಸಿದ್ದು. ಈ ವಿಡಿಯೋದಲ್ಲಿ ಆತನ ಪತ್ನಿ ಮತ್ತು ಆತನ ಅತ್ತೆ ನೀಡುತ್ತಿದ್ದ ಕಿರುಕುಳವನ್ನು ವಿವರಿಸಿದ್ದಾನೆ ಎಂದು ಬಿಯೋರಾ ನಗರ ಪೊಲೀಸ್ ಅಧಿಕಾರಿ ವಿರೇಂದ್ರ ಧಕಡ್ ಹೇಳಿದ್ದಾರೆ. ಜೊತೆಗೆ ಪತ್ನಿ ಪ್ರತಿ ಹದಿನೈದು ದಿನಗಳಿಗೊಮ್ಮ ತವರು ಮನೆಗೆ ಹೋಗುತ್ತಾಳೆ. ಅಲ್ಲಿಂದ ವಾಪಾಸಾದ ನಂತರ ಕುಟುಂಬದೊಂದಿಗೆ ಜಗಳವಾಡುತ್ತಾಳೆ. ಅದರ ಜೊತೆಗೆ ಆಕೆಯ ತಾಯಿಯ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿರುಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.