ಬೆಳಗಾವಿ : ಗಾಂಧಿ ಭಾರತ್ ಕಾರ್ಯಕ್ರಮದ ಹಿನ್ನಲೆ ಬೆಳಗಾವಿಯಲ್ಲಿ ಬೃಹತ್ ಕಾರ್ಯಕ್ರಮ ನಡೆಯುತ್ತಿದ್ದು. ಈ ಕಾರ್ಯಕ್ರಮದಲ್ಲಿ ಅನೇಕ ರಾಷ್ಟ್ರೀಯ ನಾಯಕರು ಆಗಮಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಬೃಹತ್ ಗಾಂಧಿ ಪ್ರತಿಮೆಯನ್ನು ಉದ್ಘಾಟಿಸಿದ್ದು. ಸುಮಾರು 20 ಟನ್ ತೂಕವಿದೆ ಎಂದು ಮಾಹಿತಿ ದೊರೆತಿದೆ.
ಅಯೋಧ್ಯೆ ರಾಮ ಮಂದಿರದ ರಾಮಲಲ್ಲಾ ಮೂರ್ತಿ ನಿರ್ಮಾತೃ, ಅರುಣ್ ಯೋಗಿರಾಜ್ರಿಂದ ಗಾಂಧಿ ಪ್ರತಿಮೆ ನಿರ್ಮಾಣವಾಗಿದ್ದು. ಸುಮಾರು 20 ಟನ್ ತೂಕದ 25 ಅಡಿ ಎತ್ತರದ ಗಾಂಧಿ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಸುಮಾರು 8 ಕೋಟಿ ಮೊತ್ತದಲ್ಲಿ ಅನುದಾನದಲ್ಲಿ ಬೆಳಗಾವಿಯ ಸುವರ್ಣ ಸೌದ ಆವರಣದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆ ನಿರ್ಮಾಣ ಕಾರ್ಯ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಧಿಕಾರವದಿಯಲ್ಲಿ ಪ್ರತಿಮೆ ನಿರ್ಮಾಣ ಕಾರ್ಯ ಆರಂಭವಾಗಿತ್ತು.
ಇದನ್ನೂ ಓದಿ : ಎಟಿಎಂಗೆ ತುಂಬ ಬೇಕಿದ್ದ ಹಣ ಕದ್ದು, ಪ್ರೇಯಸಿಗೆ ಚಿನ್ನ ಕೊಡಿಸಿದ್ದ ಖದೀಮ ಅಂದರ್ !
ಈ ಪ್ರತಿಮೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಉದ್ಘಾಟಿಸಿದ್ದು, ಚರಕ ತಿರುಗಿಸುವ ಮೂಲಕ ಪ್ರತಿಮೆಯನ್ನು ಉದ್ಘಾಟಿಸಿದ್ದಾರೆ. ಅಷ್ಟೇ ಅಲ್ಲದೆ ಗದಗದಲ್ಲಿರುವ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ಮಹಾತ್ಮ ಗಾಂಧಿ ವಿಶ್ವವಿದ್ಯಾಲಯ ಅಂತಾ ಮರುನಾಮಕರಣ ಮಾಡಲಾಯಿತು.