Wednesday, January 22, 2025

ಕೋಟೆಕಾರು ಬ್ಯಾಂಕ್​ ರಾಬರಿ ಪ್ರಕರಣ : ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು !

ಮಂಗಳೂರು : ಜಿಲ್ಲೆಯ ಕೋಟೆಕಾರು ಬ್ಯಾಂಕ್ ದರೋಡೆಕೋರನೊಬ್ಬನ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ ಎಂದು ಮಾಹಿತಿ ದೊರೆತಿದ್ದು. ಸ್ಥಳ ಮಹಜರು ವೇಳೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ 35 ವರ್ಷದ ಕಣ್ಣನ್​ ಮಣಿ ಎಂಬಾತನಿಗೆ ಗುಂಡೇಟು ನೀಡಿದ್ದಾರೆ.

ಜನವರಿ 17ರಂದು ಮಂಗಳೂರಿನ ಕೋಟೆಕಾರು ಬ್ಯಾಂಕ್​ ರಾಬರಿ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಪೊಲೀಸರು ತಮಿಳು ನಾಡಿನ ಮಧುರೈನಲ್ಲಿ ಬಂಧಿಸಿದ್ದರು. ಬಂಧಿತ ಆರೋಪಿಗಳಿಂದ ತಲ್ವಾರ್​, ಪಿಸ್ತೂಲ್​ಗಳನ್ನು ವಶ ಪಡಿಸಿಕೊಳ್ಳಲಾಗಿತ್ತು.

ಇದನ್ನೂ ಓದಿ: ಕೋವಿಡ್​ ನಿರ್ವಹಣೆಯಲ್ಲಿ ವಿಫಲ : WHO ದಿಂದ ಹೊರ ಬಂದ ಅಮೇರಿಕಾ !

ಆದರೆ ಇಂದು ಪೊಲೀಸರು ಆರೋಪಿಗಳನ್ನು ಸ್ಥಳ ಮಹಜರು ಮಾಡಲು ಕರೆದುಕೊಂಡು ಹೋಗಿದ್ದು. ಈ ವೇಳೆ ಮುಂಬೈನ ಚೆಂಬೂರು ನಿವಾಸಿ ಕಣ್ಣನ್ ಮಣಿ (35) ಎಂಬಾತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಆರೋಪಿ ಕಾಲಿಗೆ ಗುಂಡೇಟು ನೀಡಿದ್ದು. ಉಳ್ಳಾಲ ಕೆಸಿ ರೋಡ್ ಬಳಿಯ ಅಲಂಕಾರಗುಡ್ಡೆ ಎಂಬಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿಯನ್ನು ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ದೊರೆತಿದೆ.

RELATED ARTICLES

Related Articles

TRENDING ARTICLES