ದೆಹಲಿ : ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಮಂಗಳವಾರ ಮಹಾಕುಂಭದ ಸಂದರ್ಭದಲ್ಲಿ ಸಂಗಮ್‌ನಲ್ಲಿರುವ ಇಸ್ಕಾನ್ ಶಿಬಿರದಲ್ಲಿ ಸೇವೆ ಸಲ್ಲಿಸಿದರು.
ಅದಾನಿ ಗ್ರೂಪ್, ಇಸ್ಕಾನ್ ಸಹಯೋಗದೊಂದಿಗೆ, ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಆಧ್ಯಾತ್ಮಿಕ ಕೂಟದ ಸಂಪೂರ್ಣ ಅವಧಿಗೆ ‘ ಮಹಾಪ್ರಸಾದ್ ಸೇವಾ ‘ ಉಪಕ್ರಮದ ಅಡಿಯಲ್ಲಿ ಉಚಿತ ಊಟವನ್ನು ವಿತರಿಸಲಾಗುತ್ತಿದೆ. ಈ ಕುರಿತು ಮಾತನಾಡಿದ ಅದಾನಿ ‘ನಾನು ಮಹಾಕುಂಭಕ್ಕಾಗಿ ತುಂಬಾ ಉತ್ಸುಕನಾಗಿದ್ದೇನೆ, ಕುಂಭವನ್ನು ಭಕ್ತಿ ಮತ್ತು ಸೇವೆಯ ಪವಿತ್ರ ಕೇಂದ್ರ ಎಂದು ಕರೆದ ಅವರು, ನಾವು ಇಸ್ಕಾನ್ ಸಹಯೋಗದಲ್ಲಿ ಭಕ್ತರಿಗಾಗಿ ಮಹಾಪ್ರಸಾದ ಸೇವೆಯನ್ನು ಪ್ರಾರಂಭಿಸುತ್ತಿರುವುದು ನನ್ನ ಅದೃಷ್ಟ ಹೇಳಿದರು.
ಇದನ್ನೂ ಓದಿ : ಕೋಟೆಕಾರು ಬ್ಯಾಂಕ್ ರಾಬರಿ ಪ್ರಕರಣ : ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಗುಂಡೇಟು !
ಈ ಮಹಾಕುಂಭ ಮೇಳದಲ್ಲಿ ಕನಿಷ್ಟ 50 ಲಕ್ಷ ಜನರಿಗೆ ಪ್ರಸಾದ ನೀಡುವ ಗುರಿಯನ್ನು ಹೊಂದಿದೆ. ಎರಡು ದೊಡ್ಡ ಅಡುಗೆ ಮನೆಯಲ್ಲಿ ಊಟವನ್ನು ತಯಾರಿಸಿ ಪ್ರತಿ ದಿನ ಕನಿಷ್ಟ 1ಲಕ್ಷ ಭಕ್ತರಿಗೆ ಆಹಾರ ನೀಡುವ ನಿರೀಕ್ಷೆ ಇದೆ. ಈ ಸೇವೆಯಲ್ಲಿ ಸುಮಾರು 2500 ಸ್ವಯಂ ಸೇವಕರು ಭಾಗವಹಿಸಲಿದ್ದಾರೆ.