Tuesday, January 21, 2025

ನಿಧಾನವಾಗಿ ಸಿನಿಮಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿರುವ ನಟ ದರ್ಶನ್​ !

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲು ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್​ ನಿಧಾನವಾಗಿ ಸಿನಿಮಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದು. ಸಹೋದರ ದಿನಕರ್​ ನಿರ್ದೇಶನದ ರಾಯಲ್​ ಸಿನಿಮಾದ ಪ್ರೀಮಿಯರ್ ಶೋ ನೋಡಿದ್ದಾರೆ ಎಂದು ಮಾಹಿತಿ ಹರಿದಾಡುತ್ತಿದೆ.

ಹೊಸವರ್ಷದ ದಿನವೇ ಡೆವಿಲ್​ ಸಿನಿಮಾದ ಡಬ್ಬಿಂಗ್​ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ನಟ ದರ್ಶನ್​ ಬೆನ್ನು ನೋವಿನ ಕಾರಣದಿಂದ ಸಿನಿಮಾ ಚಿತ್ರೀಕರಣವನ್ನು ಮುಂದೂಡಿದ್ದರು. ಆದರೂ ಕೂಡ ಕೆಲ ಸಿನಿಮಾ ತಂಡಗಳ ಜೊತೆ ನಟ ದರ್ಶನ್​ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೆ ದರ್ಶನ್​ ಸಹೋದರ ದಿನಕರ್​ ತೂಗುದೀಪ್​ ನಿರ್ದೇಶನದ ರಾಯಲ್​ ಸಿನಿಮಾದ ಪ್ರೀಮಿಯರ್​ ಶೋ ನೋಡಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ಗಾಂಧಿ ಹಿಂದು ವಿರೋಧಿಯಲ್ಲ, ಸಾಯುವಾಗಲು ‘ಹೇ ರಾಮ್’​ ಎಂದು ಹೇಳಿದ್ದರು : ಸಿದ್ದರಾಮಯ್ಯ 

ಸದ್ಯ ಈ ಕುರಿತು ಪೋಟೊವೊಂದು ಹರಿದಾಡುತ್ತಿದ್ದು. ಈ ಪೋಟೊದಲ್ಲಿ ನಟ ದರ್ಶನ್​, ಅವರ ತಾಯಿ ಮೀನಾ ತೂಗುದೀಪ್​, ದಿನಕರ್​ ಒಟ್ಟಿಗೆ ನಿಂತಿದ್ದಾರೆ. ಒಟ್ಟಿನಲ್ಲಿ ನಟ ದರ್ಶನ್​ ಮತ್ತೆ ಸಿನಿಮಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES