ಬೆಂಗಳೂರು : ನಿವೃತ್ತ ಯೋಧರೊಬ್ಬರು ಮೆಟ್ರೋ ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಜಾಲಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ನಡೆದಿದ್ದು. ಮೆಟ್ರೋ ರೈಲನ್ನು ಚಲಾಯಿಸುತ್ತಿದ್ದ ಲೋಕೋ ಪೈಲೆಟ್ ಸಮಯ ಪ್ರಜ್ಞೆಯಿಂದ ಅವರ ಪ್ರಾಣ ಉಳಿದಿದೆ.
49 ವರ್ಷದ ಅನಿಲ್ ಕುಮಾರ್ ಪಾಂಡೆ ಎಂಬ ಬಿಹಾರ್ ಮೂಲದ ನಿವೃತ್ತ ಏರ್ಪೋರ್ಸ್ ಅಧಿಕಾರಿ ಮೆಟ್ರೋ ಹಳಿ ಮೇಲೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಘಟನೆ ನಡೆದಿದ್ದು. ಮೆಟ್ರೋ ನಿಲ್ದಾಣಕ್ಕೆ ಬಂದಿದ್ದ ಅನಿಲ್ ಕುಮಾರ್ ಟ್ರ್ಯಾಕ್ ಮೇಲೆ ಜಿಗಿದು ಎರಡು ಟ್ರ್ಯಾಕ್ಗಳ ಮೇಲೆ ಮಲಗಿಕೊಂಡಿದ್ದನು. ಆದರೆ ಇದನ್ನು ಗಮನಿಸಿದ ರೈಲಿನ ಲೋಕೋ ಪೈಲೆಟ್ ತಕ್ಷಣವೆ ರೈಲನ್ನು ನಿಲ್ಲಿಸಿದ್ದು. ಭಾರಿ ದುರ್ಘಟನೆ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಇದನ್ನೂ ಓದಿ: ಟ್ರ್ಯಾಕ್ಟರ್ಗೆ ಬೈಕ್ ಡಿಕ್ಕಿ : ಕೋಚಿಂಗ್ ಕ್ಲಾಸ್ಗೆ ತೆರುಳುತ್ತಿದ್ದ ಯುವಕ ಸಾ*ವು !
ಈ ಘಟನೆಯಿಂದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು. ಹಸಿರು ಮಾರ್ಗದಲ್ಲಿ ಕೇವಲ ಸಿಲ್ಕ ಬೋರ್ಡ್ ಮತ್ತು ಯಶವಂತರಪುರದ ನಡುವೆ ಮಾತ್ರ ಮೆಟ್ರೋ ಸಂಚರಿಸಿದೆ. ನಂತರ 10:50ರ ನಂತರ ಮೆಟ್ರೋ ಸಂಚಾರ ಯಥಾಸ್ಥಿತಿಗೆ ಮರಳಿದೆ.