ಬೆಂಗಳೂರು : ಬಿಗ್ಬಾಸ್ ಸ್ಪರ್ಧಿ ರಜತ್ಗೆ ಟ್ರೋಲ್ಪೇಜ್ಗಳು ತಲೆ ನೋವಾಗಿ ಪರಿಣಮಿಸಿದ್ದು. ರಜತ್ ಮತ್ತು ಮಾಜಿ ಗೆಳತಿಯೊಂದಿಗಿನ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಷ್ಟೆ ಅಲ್ಲದೆ ಪೋಟೊ ಡಿಲಿಟ್ ಮಾಡಲು ರಜತ್ ಪತ್ನಿ ಬಳಿಯಲ್ಲಿ ಹಣವನ್ನು ಕೇಳಿದ್ದು. ಇದರಿಂದ ಬೇಸತ್ತ ರಜತ್ ಪತ್ನಿ ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ್ದಾರೆ.
ಹೌದು.. ಬಿಗ್ಬಾಸ್ ಸ್ಪರ್ಧಿ ರಜತ್ಗೆ ಟ್ರೋಲ್ಪೇಜ್ಗಳು ತಲೆನೋವಾಗಿ ಪರಿಣಮಿಸಿದ್ದು. ರಜತ್ ಹಾಗೂ ಮಾಜಿ ಗೆಳತಿಯೊಂದಿಗಿನ ಪೋಟೊಗಳನ್ನು ಟ್ರೋಲ್ಪೇಜ್ಗಳಲ್ಲಿ ವೈರಲ್ ಆಗಿವೆ. ಈ ಪೋಟೋಗಳನ್ನು ಡಿಲಿಟ್ ಮಾಡುವಂತೆ ರಜತ್ ಪತ್ನಿ ಟ್ರೋಲ್ ಪೇಜ್ಗಳಲ್ಲಿ ಮನವಿ ಮಾಡಿದ್ದಾರೆ. ಆದರೆ ಟ್ರೋಲ್ಪೇಜ್ ಪೋಟೊ ಡಿಲಿಟ್ ಮಾಡಲು ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಇದಕ್ಕೆ ಒಪ್ಪಿದ ರಜತ್ ಪತ್ನಿ ಅಪರಿಚಿತ ವ್ಯಕ್ತಿಯ ಯುಪಿಐ ಐಡಿಗೆ ಸುಮಾರು 6500 ರೂಪಾಯಿ ಹಣವನ್ನು ಹಾಕಿದ್ದಾರೆ.
ಇದನ್ನೂ ಓದಿ: ಸದ್ದಿಲ್ಲದೆ ಸಪ್ತಪದಿ ತುಳಿದ ನೀರಜ್ ಚೋಪ್ರಾ : ಟೆನಿಸ್ ಆಟಗಾರ್ತಿಯ ಕೈಹಿಡಿದ ವಿಶ್ವ ಚಾಂಪಿಯನ್ !
ಆದರೆ ಹಣ ಹಾಕಿದ ನಂತರ ಮತ್ತೊಂದು ಟ್ರೋಲ್ಪೇಜ್ನಲ್ಲಿ ಪೋಟೊ ಅಪ್ಲೋಡ್ ಮಾಡಲಾಗಿದೆ. ಈ ಪೋಟೊವನ್ನು ಡಿಲಿಟ್ ಮಾಡುವಂತೆ ಮನವಿ ಮಾಡಿದಾಗ ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದು. ಇವೆಲ್ಲದರಿಂದ ಬೇಸತ್ತ ರಜತ್ ಪತ್ನಿ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ.
ಪಶ್ಚಿಮ ವಿಭಾಗದ ಸೈಬರ್ಠಾಣೆಯಲ್ಲಿ ಹತ್ತಕ್ಕೂ ಹೆಚ್ಚು ಟ್ರೋಲ್ ಪೇಜ್ ವಿರುದ್ಧ ಎಫ್.ಐ.ಆರ್ ದಾಖಲಿಸಿರುವ ರಜತ್ ಪತ್ನಿ ಅಂಕಿತಾ, ಟ್ರೋಲ್ ಪೇಜ್ಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಟ್ರೋಲ್ಪೇಜ್ಗಳಲ್ಲಿ ಪೋಟೊಗಳನ್ನು ಡಿಲಿಟ್ ಮಾಡಿದ್ದು. ಅಕೌಂಟ್ಗಳನ್ನು ಡಿಆ್ಯಕ್ಟಿವೇಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬ್ಯಾಕ್ಮೇಲ್ ಮಾಡಿದ ಅಪರಿಚಿತ ವ್ಯಕ್ತಿಗಾಗಿ ಪೊಲೀಸರು ಶೋಧ ಕಾರ್ಯವನ್ನು ಆರಂಭಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.