Monday, January 20, 2025

ಗಾಂಧಿ ಹ*ತ್ಯೆಯಲ್ಲಿ ನೆಹರೂ ಪಾತ್ರವಿದೆ : ಯತ್ನಾಳ್​

ಹುಬ್ಬಳ್ಳಿ : ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ‘ ಗಾಂಧಿ ಹತ್ಯೆಯಲ್ಲಿ ನೆಹರು ಪಾತ್ರವಿದೆ, ಗೋಡ್ಸೆ ಹೊಡೆದಿದ್ದು ಕೇವಲ ಒಂದು ಗುಂಡು ಮಾತ್ರ, ಆದರೆ ಉಳಿದ ಎರಡು ಗುಂಡುಗಳು ಯಾರವು ? ಆ ಎರಡು ಗುಂಡುಗಳನ್ನು ಹೊಡೆಸಿದ್ದು ನೆಹರು ಎಂದು ಹೇಳಿದರು.

ಕಾಂಗ್ರೆಸ್​ ಅಂಬೆಡ್ಕರ್​ಗೆ ಸಾಕಷ್ಟು ಅಪಮಾನ ಮಾಡಿದೆ ಎಂದು ಹೇಳಿದ ಯತ್ನಾಳ್​ ‘ ಕಾಂಗ್ರೆಸ್ ಅಂಬೆಡ್ಕರ್​ಗೆ ಸಾಕಷ್ಟು ಅಪಮಾನ ಮಾಡಿದೆ. ಈಗ ಕಾಂಗ್ರೆಸ್​ ಅಂಬೆಡ್ಕರ್ ಹೆಸರಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇವರಿಗೆ ಜೈ ಭೀಮ್​ ಎನ್ನುವ ಯಾವುದೇ ಅರ್ಹತೆ ಇಲ್ಲ, ಅಷ್ಟೆ ಅಲ್ಲದೆ ಗೋಡ್ಸೆ ಗಾಂಧಿಗೆ ಕೇವಲ ಒಂದು ಗುಂಡು ಹೊಡೆದಿದ್ದಾರೆ. ಇನ್ನುಳಿದ ಎರಡು ಗುಂಡುಗಳು ಯಾರವು? ಎಂದು ಪ್ರಶ್ನಿಸಿದ ಯತ್ನಾಳ್​, ಗಾಂಧಿ ಹತ್ಯೆಯಲ್ಲಿ ನೆಹರು ಪಾತ್ರವಿದೆ ಎಂದು ಹೇಳಿದರು.

ಇದನ್ನೂ ಓದಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ : ರಸ್ತೆ ಮೇಲೆ ಹರಿಯಿತು ಬ್ಯಾರಲ್​ಗಟ್ಟಲೆ ಕ್ರೂಡ್​ ಆಯಿಲ್​ !

ನನ್ನ ಮೇಲೆ ಪ್ರಕರಣ ದಾಖಲು ಮಾಡುತ್ತಾರೆ, ಆದರೆ ವಿಜಯೇಂದ್ರ ಮೇಲೆ ಕೇಸ್​ ಹಾಕಲ್ಲ !

ರಾಜ್ಯ ಸರ್ಕಾರದ ಬಗ್ಗೆ ಮಾತನಾಡಿದ ಯತ್ನಾಳ್​ ‘ ಮೂಡಾ ಹಗರಣದಲ್ಲಿ ಯಾರೂ ಸಾಚಾ ಇಲ್ಲ, ಸಿಎಂ ಸಿದ್ದರಾಮಯ್ಯರೆ 185 ಕೋಟಿ ವಾಲ್ಮೀಕಿ ಹಗರಣವನ್ನು ಒಪ್ಪಿಕೊಂಡಿದ್ದಾರೆ. ಆದರೆ ಅವರು ಮಾತ್ರ ಕೇಂದ್ರ ಸರ್ಕಾರ ನಮ್ಮ ಮೇಲೆ ಟಾರ್ಗೆಟ್​ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಆದರೆ ರಾಜ್ಯದಲ್ಲಿ ನನ್ನ ಮೇಲೆ ಮತ್ತು ಸಿಟಿ ರವಿಯನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಹಿಂದೂಗಳ ಬಗ್ಗೆ ನಾವು ಮಾತನಾಡಿದರೆ  ಕೇಸ್​ ಹಾಕುತ್ತಾರೆ. ಆದರೆ ವಿಜಯೇಂದ್ರನ ಮೇಲೆ ಮಾತ್ರ ಕೇಸ್​ ಹಾಕಲ್ಲ. ಹಿಂದೂಗಳ ಭಾವನೆ ಕೇರಳಿಸಿ , ರಾಜ್ಯದಲ್ಲಿ ದಂಗೆ ಏಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ. ಈ ವಿಶಯದಲ್ಲಿ ನಾವು ಕೂಡ ಹಿಂದೆ ಅಧಿಕಾರದಲ್ಲಿದ್ದಾಗ ತಪ್ಪು ಮಾಡಿದ್ದೇವೆ. ನಮ್ಮ ಸರ್ಕಾರದಲ್ಲಿ ಸರಿಯಾಗಿ ಕ್ರಮ ಕೈಗೊಂಡಿದ್ದರೆ ಈ ರೀತಿಯ ಘಟನೆಗಳು ಆಗುತ್ತಿರಲಿಲ್ಲ ಎಂದು ಹೇಳಿದರು.

 

RELATED ARTICLES

Related Articles

TRENDING ARTICLES