ಒಲಂಪಿಕ್ ಸ್ವರ್ಣ ಪದಕ ವಿಜೇತ ಹಾಗೂ ವಿಶ್ವ ಚಾಂಪಿಯನ್ ಜಾವಲಿನ್ ಎಸೆತಗಾರ ನೀರಜ್ ಚೋಪ್ರ ಮದುವೆಯಾಗಿದ್ದು. ಟೆನಿಸ್ ಆಟಗಾರ್ತಿ ಹಿಮಾನಿ ಮೋರ್ ಕೈ ಹಿಡಿದಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಷ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನೀರಜ್ ‘ ಕುಟುಂಬದ ಜೊತೆ ಜೀವನದ ಹೊಸ ಅಧ್ಯಾಯ’ ಎಂದು ಬರೆದುಕೊಂಡಿದ್ದಾರೆ.
ನೀರಜ್ ಚೋಪ್ರಾ ಭಾರತದ ಚಿನ್ನದ ಹುಡುಗ ಎಂದೆ ಖ್ಯಾತರಾಗಿದ್ದು. ಒಲಂಪಿಕ್ನ ಅಥ್ಲೇಟಿಕ್ಸ್ ವಿಭಾಗದಲ್ಲಿ ಮೊದಲ ಬಾರಿಗೆ ಚಿನ್ನದ ಪದಕವನ್ನು ತಂದುಕೊಟ್ಟಿದ್ದರು. ಟೋಕಿಯೋ ಓಲಂಪಿಕ್ಸ್ನಲ್ಲಿ ಚಿನ್ನದ ಪದಕ ಮತ್ತು ಪ್ಯಾರಿಸ್ ಒಲಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಅಥ್ಲೇಟಿಕ್ಸ್ನಲ್ಲಿ ಸತತ ಎರಡು ಪದಕ ಜಯಿಸಿದ ಆಟಗಾರ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
ಇದನ್ನೂ ಓದಿ : ತಡವಾಗಿ ಕೆಲಸಕ್ಕೆ ಬಂದ ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳು !
ಟಿನಿಸ್ ತಾರೆ ಹಿಮಾನಿ ಮೋರ್ ಯಾರು ?
ನೀರಜ್ ಚೋಪ್ರ ಮದುವೆ ಪೋಟೊಗಳು ವೈರಲ್ ಆದ ಕೂಡಲೆ, ಹಿಮಾನಿ ಮೋರ್ ಯಾರು ಎಂಬ ಹುಡುಕಾಟಗಳು ಹೆಚ್ಚಾಗಿವೆ. ಹರಿಯಾಣದ ಸೋನಿಪತ್ ಮೂಲದವರಾದ ಹಿಮಾನಿ ಟೆನಿಸ್ ತಾರೆಯಾಗಿದ್ದಾರೆ. ಈ ಹಿಂದೆ ರಾಷ್ಟ್ರೀಯ ಟೆನಿಸ್ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದರು.\