ವಿಜಯಪುರ : ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವಿಜಯಪುರದ ಇಟ್ಟಂಗಿ ಬಟ್ಟಿಯಲ್ಲಿ ನಡೆದಿದ್ದು. ಕಾರ್ಮಿಕರ ಮೇಲೆ ಹಲ್ಲೆ ನಡೆಸಿರುವ ವಿಡಿಯೋವನ್ನು ದುಷ್ಕರ್ಮಿಗಳು ತಮ್ಮ ಇನ್ಸ್ಟಗ್ರಾಂದಲ್ಲಿ ಹಾಕಿಕೊಂಡಿದ್ದಾರೆ.
ವಿಜಯಪುರ ನಗರದ ಹೊರಭಾಗದಲ್ಲಿರು ಇಟ್ಟಂಗಿ ಬಟ್ಟಿಯಲ್ಲಿ ಘಟನೆ ನಡೆದಿದ್ದು. ಸದಾಶಿವ ಬಸಪ್ಪ ಮಾದರ (27), ಸದಾಶಿವ ಚಂದ್ರಪ್ಪ ಬಬಲಾದಿ ( 38), ಉಮೇಶ ಮಾಳಪ್ಪ ಮಾದರ (25) ಎಂಬಾತರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಈ ಮೂವರು ಕಾರ್ಮಿಕರು ಸಂಕ್ರಾಂತಿ ಹಬ್ಬಕ್ಕೆ ಎಂದು ಮನೆಗೆ ತೆರಳಿದ್ದರು. ಹಬ್ಬ ಮುಗಿಸಿಕೊಂಡು ಜನವರಿ 16ರಂದು ತಮ್ಮ ಸಾಮಾನಗಳನ್ನು ಕೊಂಡೊಯ್ಯಲು ಬಂದಿದ್ದರು. ‘
ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಭೀಕರ ಸರಣಿ ಅಪಘಾತ : ಲಾರಿ ಕೆಳಗೆ ಸಿಲುಕಿ ಅಪ್ಪಚ್ಚಿಯಾದ ಕಾರು !
ಆದರೆ ಈ ವೇಳೆ ಅಲ್ಲಿಗೆ ಬಂದ ಇಟ್ಟಂಗಿ ಬಟ್ಟಿ ಮಾಲೀಕ ಖೇಮು ರಾಠೋಡ ಆತನ ಮಗ ಮತ್ತು 15ಕ್ಕೂ ಹೆಚ್ಚು ದುಷ್ಕರ್ಮಿಗಳು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮೂರು ದಿನಗಳ ಕಾಲ ರೂಮಿನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದು. ಪ್ರತಿ 15 ನಿಮಿಷಕ್ಕೆ ಒಮ್ಮೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯ ದೃಷ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಕಾರ್ಮಿಕರು ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.