Monday, January 20, 2025

ಇದು ನನ್ನ ಕೊನೆಯ ನಿರೂಪಣೆ : ಬಿಗ್​ಬಾಸ್​ ಜರ್ನಿ ನೆನೆದು ಭಾವನಾತ್ಮಕ ಪೋಸ್ಟ್​ ಹಂಚಿಕೊಂಡ ಕಿಚ್ಚ !

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ಮುಗಿಯಲು ಕೇವಲ ಒಂದುವಾರ ಮಾತ್ರ ಉಳಿದಿದೆ. ಈ ನಡುವೆ ಕಾರ್ಯಕ್ರಮದ ಜನಪ್ರಿಯ ನಿರೂಪಕರಾದ ಕಿಚ್ಚ ಸುದೀಪ್​ ತಮ್ಮ ಸಾಮಾಜಿಕ ಜಾಲತಾಣ ಎಕ್ಷ್​ನಲ್ಲಿ ಕಾರ್ಯಕ್ರಮದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ‘

ಬಿಗ್​ಬಾಸ್​ ನಿರೂಪಣೆಗೆ ಗುಡ್​ಬಾಯ್​ ಹೇಳುವುದಾಗಿ ಸುದೀಪ್​ ಸೀಸನ್​ ಆರಂಭದಲ್ಲಿಯೆ ಹೇಳಿದ್ದರು. ಈ ಹಿಂದೆಯೂ ಬಿಗ್​ಬಾಸ್​ನಿಂದ ಸಿನಿಮಾದಲ್ಲಿ ತೊಡಗಿಸಿಕೊಳ್ಳುವುದಕ್ಕೆ ತೊಂದರೆಯಾಗುತ್ತಿದೆ ಎಂದು ಅನೇಕ ಬಾರಿ ಹೇಳಿದ್ದರು. ಆದರೆ ಹನ್ನೊಂದನೆ ಸೀಸನ್​ನಲ್ಲಿ ಧೃಡ ನಿರ್ಧಾರ ಕೈಗೊಂಡಿರುವ ಕಿಚ್ಚ ಇದೇ ಕೊನೆಯ ಸೀಸನ್​ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಹನಿಟ್ರ್ಯಾಪ್​ ಪ್ರಕರಣ : ಅಂಕಲ್​ ಬಟ್ಟೆ ಬಿಚ್ಚಿಸಿ ಪಾಪರ್​ ಮಾಡಿದ್ದ ಸುಂದರಿ ಅರೆಸ್ಟ್​​ ! 

ಸುದೀಪ್‌ ಹೇಳಿದ್ದೇನು?

ಕಳೆದ 11 ಸೀಸನ್‌ಗಳಿಂದ ನಾನು ಬಿಗ್‌ಬಾಸ್‌ ಅನ್ನು ತುಂಬಾ ಇಷ್ಟಪಟ್ಟಿದ್ದೇನೆ. ನೀವು ತೋರಿಸಿದ ಪ್ರೀತಿಗೆ ಧನ್ಯವಾದಗಳು. ಮುಂಬರುವ ಫೈನಲ್ ನನ್ನ ಕೊನೆಯ ನಿರೂಪಣೆ. ನಿಮ್ಮನ್ನು ಮನರಂಜಿಸಲು ನಾನು ಪ್ರಯತ್ನಿಸುತ್ತೇನೆ.

ಬಿಗ್​ಬಾಸ್ ಜರ್ನಿ ಜೀವನದಲ್ಲಿ ಮರೆಯಲಾಗದ ನೆನಪು. ಇದನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದ್ದೇನೆ ಎಂಬ ಸಂತೋಷ ನನಗಿದೆ. ಈ ಅವಕಾಶ ಕೊಟ್ಟ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ನಿಮ್ಮೆಲ್ಲರ ಮೇಲೂ ಅಪಾರವಾದ ಪ್ರೀತಿ ಮತ್ತು ಗೌರವವಿದೆ ಎಂದು ಕಿಚ್ಚ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES