Monday, January 20, 2025

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ : ರಸ್ತೆ ಮೇಲೆ ಹರಿಯಿತು ಬ್ಯಾರಲ್​ಗಟ್ಟಲೆ ಕ್ರೂಡ್​ ಆಯಿಲ್​ !

ಹಾವೇರಿ : ರಸ್ತೆ ಬದಿಯಲ್ಲಿ ಗಿಡಗಳಿಗೆ ನೀರು ಹಾಯಿಸುತ್ತಿದ್ದ ಟ್ರ್ಯಾಕ್ಟರ್​ ಮತ್ತು ಕ್ರೂಡ್​ ಆಯಿಲ್​ ಸಾಗಿಸುತ್ತಿದ್ದ ಲಾರಿ ನಡುವೆ ಭೀಕರ ಅಪಘಾತಾವಾಗಿದ್ದು. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದೆ. ಅಪಘಾತದ ರಭಸಕ್ಕೆ ಲಾರಿಯಲ್ಲಿ ಸಾಗಿಸುತ್ತಿದ್ದ ಕ್ರೂಡ್​ ಆಯಿಲ್​ ರಸ್ತೆ ಮೇಲೆ ಹರಿದಿದ್ದು. ಜನರು ಕ್ರೂಡ್​ ಆಯಿಲ್​ ತುಂಬಿಕೊಳ್ಳಲು ಮುಗಿಬಿದ್ದಿದ್ದಾರೆ.

ಹಾವೇರಿಯ ಮೊಟೆಬೇನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ(NK4)ನಲ್ಲಿ ಅಪಘಾತವಾಗಿದ್ದು. ರಸ್ತೆ ಬದಿಯಲ್ಲಿದ್ದ ಗಿಡಗಳಿಗೆ ನೀರು ಹಾಯಿಸುತ್ತಿದ್ದ ಟ್ರ್ಯಾಕ್ಟರ್​ಗೆ​ ರಸ್ತೆಯಲ್ಲಿ ಕ್ರೂಡ್ ಆಯಿಲ್ ತುಂಬಿಕೊಂಡು ಹೋಗುತ್ತಿದ್ದ​ ಲಾರಿ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಲಾರಿ ಚಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದು. ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಆಸ್ಪತ್ರೆ ಶವಗಾರದಲ್ಲಿ ತಂದೆ , ಮದುವೆ ಸಂಭ್ರಮದಲ್ಲಿ ಮಗಳು : ಏನಿದು ಹೃದಯಾವಿದ್ರಾವಕ ಘಟನೆ

ಅಪಘಾತದಿಂದ ಕ್ರೂಡ್​ ಆಯಿಲ್​ ತುಂಬಿಸಿದ್ದ ಬ್ಯಾರೆಲ್​ಗಳು ರಸ್ತೆಯ ಮೇಲೆ ಬಿದ್ದಿದ್ದು. ಹತ್ತಾರು ಬ್ಯಾರಲ್​ ಆಯಿಲ್​ ರಸ್ತೆ ಮೇಲೆ ಹರಿದಿದೆ. ಆಯಿಲ್​ ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದಾರೆ. ಬ್ಯಾಡಗಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES