ಬೆಳಗಾವಿ : ಅಂಕಳಗಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಜಾರಕಿ ಹೋಳಿ ವಿಜಯೇಂದ್ರ ಮೇಲೆ ಮುಗಿಬಿದ್ದಿದ್ದಾರೆ. ಜೊತೆಗೆ ಇನ್ನು ಪಕ್ಷಕ್ಕೆ ಬಂದು ಮೂರು ವರ್ಷವಾಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿದ ರಮೇಶ್ ಜಾರಕಿಹೋಳಿ. ‘ನಾನು ಬಂದಿದ್ಕೆ ನಿಮ್ಮಪ್ಪ ಸಿಎಂ ಆಗಿದ್ದು, ಅದೇ ಹರಾಮಿ ದುಡ್ಡಲ್ಲಿ ನೀನು ಬದುಕ್ತಿದ್ದಿಯ ಎಂದು ಹೇಳಿದರು.
ನಾನು ಮನಸು ಮಾಡಿದರೆ ‘ನಿನ್ನ ರಾಜ್ಯದ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದ ಶಕ್ತಿ ನನಗಿದೆ ಆದರೆ
ನಿನ್ನಷ್ಟು ಕೀಳು ಮಟ್ಟದ ರಾಜಕಾರಣಿ ನಾನು ಅಲ್ಲಾ.ವಿಜಯೇಂದ್ರ ಬಗ್ಗೆ ನನಗೆ ಗೌರವ ಇಲ್ಲ, ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಗೌರವ ಇದೆ. ವಿಜಯೇಂದ್ರರನ್ನು ಬದಲಿಸಿ ಹೊಸಬರಿಗೆ ಅವಕಾಶ ಕೊಡಿ. ಇನ್ನೇನು ಯಡಿಯೂರಪ್ಪ ಅವರೇ ನೀವು ಮುಖ್ಯಮಂತ್ರಿ ಆಗಲ್ಲ.ಪದೇ ಪದೇ ಸೈಕಲ್ ಮೇಲೆ ಓಡಾಡಿದೀನಿ ಅಂತಾ ಹೇಳಬೇಡಿ. ಅದರ ಎರಡು ಪಟ್ಟು ನೀವು ಲಾಭ ಪಡೆದುಕೊಂಡಿದಿರಿ, ಇದನ್ನ ನೀವು ಹೇಳಬೇಡಿ ಅವಮಾನ ಆಗುತ್ತೆ.ವಾಜಪೇಯಿ, ಮೋದಿಯವರು ಇನ್ನೂ ಒಂದು ಸೈಕಲ್ ತಗೊಂಡಿಲ್ಲ ಆದರೆ ನೀವು ಏನೇನೋ ತಗೊಂಡಿದ್ದೀರ.
ಇದನ್ನೂ ಓದಿ:ವಿಜಯೇಂದ್ರ ನೀನು ಬಚ್ಚಾ, ಅಧ್ಯಕ್ಷ ಸ್ಥಾನಕ್ಕೆ ನೀನು ಯೋಗ್ಯನಲ್ಲ : ರಮೇಶ್ ಜಾರಕಿಹೋಳಿ
ಮುಂದುವರಿದು ಮಾತನಾಡಿದ ರಮೇಶ್ ಜಾರಕಿಹೋಳಿ ‘ನಾನು ಪಕ್ಷಕ್ಕೆ ಬಂದು ಮೂರು ವರ್ಷ ಆಯ್ತು ಅಂತೀಯಾ. ನಾನು ಬಂದಿದ್ದು ನಿಮ್ಮ ಅಪ್ಪನ ಸಿಎಂ ಮಾಡಲು. ಅದೇ ಹರಾಮಿ ದುಡ್ಡಲ್ಲಿ ನೀನು ಓಡಾಡ್ತಿದಿ. ನೀನು ಇನ್ನು ಬಚ್ಚಾ ಇದೀಯಾ ವಿಜಯೇಂದ್ರ . ಅದಕ್ಕೆ ಬಹುಸಂಖ್ಯಾತ ಯತ್ನಾಳ್ರನ್ನು ನಾಯಕ ಎಂದು ಒಪ್ಪಿಕೊಂಡಿದ್ದೇವೆ. ಲಿಂಗಾಯತರಲ್ಲಿ ಇನ್ನೂ ಸಾಕಷ್ಟು ನಾಯಕರಿದ್ದಾರೆ. ನೀನಿನ್ನು ಸಣ್ಣ ಹುಡುಗಾ ನೀನು ಅಧ್ಯಕ್ಷ ಸ್ಥಾನ ಬೇಡ ಎಂಬ ರೀತಿಯಲ್ಲಿ ಮಾತನಾಡಿದರು. ಆದರೆ ಮುಂದುವರೆಸಿದ್ರೇ ಆಗಲಿ. ಪಕ್ಷದ ನಿರ್ಣಯ ನಾನು ಸ್ವಾಗತ ಮಾಡುತ್ತೇನೆ.
ಆದರೆ ನೀನು ಅಧ್ಯಕ್ಷ ಸ್ಥಾನ ಬಿಟ್ಟು ಬೇರೆಯವರಿಗೆ ಅವಕಾಶ ಕೊಡು. ನೀನಿನ್ನು ಸಣ್ಣ ಹುಡುಗ ಇದಿ ನಿನಗೆ ಏನೂ ಮಾತಾಡಬೇಕು ಗೊತ್ತಾಗಲ್ಲ. ಗೂಂಡಾಗಿರಿ ರೀತಿ ಮಾತಾಡುವುದನ್ನ ಬಿಡು. ನಮ್ಮ ಮುಂದೆ ಡ್ಯಾಶ್ ಡ್ಯಾಶ್ ಅಂತವರನ್ನ ತಂದು ಯುದ್ದಕ್ಕೆ ನಿಲ್ಲಿಸಿದ್ದಾರೆ. 2028ಕ್ಕೆ ಮತ್ತೆ ಪಕ್ಷವನ್ನ ಅಧಿಕಾರಕ್ಕೆ ತರುತ್ತೇವೆ. ಜಾತಿ ಆಧಾರದ ಮೇಲೆ ನಾನು ರಾಜಕಾರಣ ಮಾಡಿಲ್ಲ. ಕ್ಷೇತ್ರದ ಜನರಿಗೆ ನನ್ನಿಂದ ಎನಾದ್ರೂ ತಪ್ಪಾದ್ರೇ ಯಾರಿಗಾದರೂ ಅಂದಿದ್ರೇ ಕ್ಷಮಿಸಿ ಎಂದು ರಮೇಶ್ ಜಾರಿಕಿ ಹೋಳಿ ಹೇಳಿದ್ದಾರೆ.