Saturday, January 18, 2025

ಪ್ರತಾಪ್​ ಸಿಂಹ ಉಚ್ಚಾಟನೆಯ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ : ಯದುವೀರ್​

ಮೈಸೂರು : ಮಾಜಿ ಸಂಸದ ಪ್ರತಾಪ್​ ಸಿಂಹರ ಉಚ್ಚಾಟನೆಗೆ ಕಾರ್ಯಕರ್ತರು ಮನವಿ ಮಾಡಿಕೊಂಡಿರುವ ವಿಚಾರದ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಸಂಸದ ಯದುವೀರ್ ‘ಪ್ರತಾಪ್​ ಸಿಂಹ ನೀಡಿರುವ ಹೇಳಿಕೆಗಳು ಕಾರ್ಯಕರ್ತರಿಗೆ ಬೇಸರ ತರಿಸಿರಬಹುದು, ಹೀಗಾಗಿ ಉಚ್ಚಾಟನೆಗೆ ಮನವಿ ಮಾಡಿದ್ದಾರೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಪ್ರತಾಪ್​ ಸಿಂಹ ‘ಕಳೆದ ಮೂರು ತಿಂಗಳಿನಲ್ಲಿ ಪ್ರತಾಪ ಸಿಂಹ ನೀಡಿರುವ ಹೇಳಿಕೆಗಳು ಮತ್ತು ನಡೆದಿರುವ ಘಟನೆಗಳಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಹೀಗಾಗಿ ಉಚ್ಚಾಟನೆಗೆ ಮನವಿ ಕೊಟ್ಟಿದ್ದಾರೆ. ಉಚ್ಚಾಟನೆಯ ಬಗ್ಗೆ ಪಕ್ಷದ ವರಿಸ್ಟರು ತೀರ್ಮಾನ ಮಾಡುತ್ತಾರೆ.

ಇದನ್ನೂ ಓದಿ: ಈ ಬಾರಿಯ ಹುಟ್ಟುಹಬ್ಬಕ್ಕೆ ಮನೆ ಬಳಿ ಬರಬೇಡಿ : ನಟ ದುನಿಯಾ ವಿಜಯ್​ ಪೋಸ್ಟ್​ !

ಆದರೆ ನನಗೆ ವೈಯಕ್ತಿಕವಾಗಿ ಯಾರೂ ಪಕ್ಷ ಬಿಟ್ಟು ಹೋಗುವುದು ಇಷ್ಟವಿಲ್ಲ. ವಿರೋಧ ಪಕ್ಷದ ಸ್ಥಾನದಲ್ಲಿರುವ ನಾವು ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕಿದೆ. ನಮ್ಮನಮ್ಮಲೇ ಗೊಂದಲಗಳು ವಿರೋಧಬಾಸಗಳು ನಡೆಯಬಾರದು. ಎಲ್ಲವನ್ನೂ ತಿದ್ದಿಕೊಂಡು ಒಟ್ಟಾಗಿ ಸಾಗುವ ಕಾಲ ಇದು ಎಂದು ಸಂಸದ ಯದುವೀರ್​ ಹೇಳಿಕೆ ನೀಡಿದರು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು !

ಇಡಿ ಮುಡಾ ಆಸ್ತಿ ಜಪ್ತಿ ವಿಚಾರವಾಗಿ ಮಾತನಾಡಿದ ಸಂಸದ ಯದುವೀರ್​ ‘ಮುಡಾದಲ್ಲಿ ತಪ್ಪುಗಳು ಆಗಿದೆ ಎಂಬುದು ಇಡಿಯ ವರದಿಯಲ್ಲಿ ಗೊತ್ತಾಗಿದೆ. ಇದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ಆರೋಪ ಬಂದ ದಿನವೇ ನಾವು ಸಿಎಂ ರಾಜೀನಾಮೆ ಕೇಳಿದ್ದೇವು‌. ಆದರೆ ಸಿಎಂ ತನಿಖೆಯಾಗಲಿ ಎಂದು ಹೇಳುತ್ತಿದ್ದರು.ಈಗ ಇಡಿ ತನಿಖೆ ಮಾಡಿ ಅಕ್ರಮ ಆಗಿದೆ ಎಂದು ವರದಿ ಬಿಡುಗಡೆ ಮಾಡಿದೆ.

ಈಗಲಾದರೂ ಮುಖ್ಯಮಂತ್ರಿಗಳು ರಾಜೀನಾಮೇ ಕೊಡಬೇಕು. ನಿಪಕ್ಷ ತನಿಖೆಗೆ ಸಿಎಂ ಅನುಕೂಲ ಮಾಡಿಕೊಡಲಿ. ಸಂಪೂರ್ಣ ತನಿಖೆ ಮುಗಿದ ಮೇಲೆ ತಪ್ಪಿತ್ಥಸ್ತರಲ್ಲ ಎಂದು ಸಾಭಿತಾದರೆ ಮತ್ತೆ ಅಧಿಕಾರ ಪಡೆದುಕೊಳ್ಳಲಿ. ಸಿಎಂ ರಾಜೀನಾಮೆಗೆ ಬಿಜೆಪಿ ಮತ್ತೆ ಹೋರಾಟ ಆರಂಭಿಸುತ್ತೇವೆ. ಇದು ಮುಡಾವನ್ನು ಕ್ಲೀನ್ ಆಗುವ ಮೊದಲ ಹೆಜ್ಜೆ. ಮುಡಾ ಸಂಪೂರ್ಣವಾಗಿ ಕ್ಲೀನ್ ಆಗಲು ಇನ್ನೂ ಎರೆಡು ವರ್ಷ ಬೇಕಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES