Saturday, January 18, 2025

ಚಾಂಪಿಯನ್ಸ್​ ಟ್ರೋಪಿಗೆ ಭಾರತ ತಂಡ ಪ್ರಕಟ : ತಂಡಕ್ಕೆ ಮರಳಿದ ಶಮಿ​ !

ಮುಂದಿನ ತಿಂಗಳು ಫೆಬ್ರವರಿ 19ರಿಂದ ಆರಂಭವಾಗಲಿರುವ ಚಾಂಪಿಯನ್ಸ್​ ಟ್ರೋಫಿಗೆ ಕೊನೆಗೂ ಟೀಮ್​ ಇಂಡಿಯಾ ತಂಡ ಪ್ರಕಟವಾಗಿದ್ದು. ರೋಹಿತ್​ ಶರ್ಮ ನಾಯಕತ್ವದಲ್ಲಿ ಭಾರತ ತಂಡ ಚಾಂಪಿಯನ್​ ಟ್ರೋಪಿ ಆಡಲಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ಬಲಿಷ್ಠ ತಂಡವನ್ನು ಚಾಂಪಿಯನ್​ ಟ್ರೋಫಿಗೆ ಬಿಸಿಸಿಐ ಆಯ್ಕೆ ಮಾಡಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿದ್ದು, ಇದೀಗ ಟೀಂ ಇಂಡಿಯಾ ಪ್ರಕಟಣೆಯ ಜೊತೆಗೆ ಒಟ್ಟು 7 ತಂಡಗಳ ಪಟ್ಟಿ ಹೊರಬಿದ್ದಂತ್ತಾಗಿದೆ. ಉಳಿದಂತೆ ಆತಿಥೇಯ ಪಾಕಿಸ್ತಾನ ಮಾತ್ರ ಇದುವರೆಗೂ ತನ್ನ ತಂಡವನ್ನು ಪ್ರಕಟಿಸಿಲ್ಲ.

ಇದನ್ನೂ ಓದಿ: ಟ್ರೈನಿ ವೈದ್ಯೆ ಅತ್ಯಾಚಾರ ಪ್ರಕರಣ : ಕೇವಲ 57 ದಿನದಲ್ಲೆ ತೀರ್ಪು ಪ್ರಕಟಿಸಿದ ನ್ಯಾಯಾಲಯ !

t20  ವಿಶ್ವಕಪ್​ ಗೆದ್ದು ವಿಶ್ವಾಸದಲ್ಲಿರುವ ಭಾರತ ತಂಡ ಚಾಂಪಿಯನ್​ ಟ್ರೋಫಿಗೆ ಸಕಲ ಸಿದ್ದತೆಗಳನ್ನು ಕೈಗೊಂಡಿದೆ. ಪಾಕ್​ನಲ್ಲಿ ಚಾಂಪಿಯನ್​ ಟ್ರೋಫಿ ನಡೆಯುತ್ತಿದ್ದು. ಭಾರತ ತನ್ನಲ್ಲಾ ಪಂದ್ಯಗಳನ್ನು ಹೈಬ್ರೀಡ್​ ಮಾದರಿಯಲ್ಲಿ ದುಬೈನಲ್ಲಿ ಆಡಲಿದೆ. ಇನ್ನು ಚಾಂಪಿಯನ್​ ಟ್ರೊಫಿ ರಚಿಸಿರುವ ತಂಡ ಈ ಕೆಳಗಿನಂತಿದೆ.

2025ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರವೀಂದ್ರ ಜಡೇಜಾ.

RELATED ARTICLES

Related Articles

TRENDING ARTICLES