Sunday, January 19, 2025

ಹನಿಟ್ರ್ಯಾಪ್​ ಪ್ರಕರಣ : ಅಂಕಲ್​ ಬಟ್ಟೆ ಬಿಚ್ಚಿಸಿ ಪಾಪರ್​ ಮಾಡಿದ್ದ ಸುಂದರಿ ಅರೆಸ್ಟ್​​ !

ಬೆಂಗಳೂರು : ಹನಿಟ್ರ್ಯಾಪ್ ಪ್ರಕರಣವೊಂದರಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ನಯನಾ ಸೇರಿದಂತೆ ಸಂತೋಷ್, ಅಜಯ್ ಮತ್ತು ಜಯರಾಜ್ ಎಂಬುವವರನ್ನು ಅರೆಸ್ಟ್​ ಮಾಡಲಾಗಿದೆ. ಪ್ರಕರಣ ದಾಖಲಾದಾಗಿನಿಂದ ನಗರದ ಬೇರೆ ಬೇರೆ ಕಡೆ ನಯನಾ ತಲೆ ಮರೆಸಿಕೊಂಡಿದ್ದಳು. ಸದ್ಯ ವಿಚಾರಣೆ ನಡೆಸಿರುವ ಪೊಲೀಸರು, ಒಬ್ಬರಿಗೆ ಮಾತ್ರ ಈ ರೀತಿ ಹನಿಟ್ರ್ಯಾಪ್ ಮಾಡಿರುವುದು ಬೆಳಕಿಗೆ ಬಂದಿದೆ. ನಯನಾ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ‌ ಮಾಡಲಾಗಿದೆ.

ಏನಿದು ಘಟನೆ !

ಸಿವಿಲ್​ ಕಾಂಟ್ರಕ್ಟರ್​ ಆಗಿದ್ದ ಅಂಕಲ್​ಗೆ ಸ್ನೇಹಿತನೊಬ್ಬನ ಮೂಲಕ ನಯನಾ ಎಂಬ ಯುವತಿ ಪರಿಚಯವಾಗಿದ್ದಳು. ಪರಿಚಯವಾದ ಮೇಲೆ ಪ್ರತಿದಿನ ಕರೆ ಮಾಡಿ ಅಂಕಲ್​ ಜೊತೆಗೆ ನಯನಾ ಮಾತನಾಡುತ್ತಿದ್ದಳು. ಡಿಸೆಂಬರ್ 09ರಂದು ಯುವತಿ ಟೀ ಕುಡಿಯಲು ಅಂಕಲ್​ನ್ನು ಮನೆಗೆ ಕರೆದಿದ್ದಳು.

ಯುವತಿಯ ಕರೆಗೆ ಓಗೊಟ್ಟ ಅಂಕಲ್​ ಯುವತಿಯ ಮನೆಗೆ ಹೋಗಿದ್ದನು. ಈ ವೇಳೆ ಪೂರ್ವ ನಿಯೋಜಿತಾ ಯೋಜನೆಯಂತೆ ನಕಲಿ ಪೊಲೀಸ್​ ವೇಶದಲ್ಲಿ ಈ ಗ್ಯಾಂಗ್​ ಮನೆಗೆ ಎಂಟ್ರಿ ಕೊಟ್ಟಿದೆ. ಪೊಲೀಸ್​ ವೇಶದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದ ಆರೋಪಿಗಳು ವ್ಯಭಿಚಾರ ನಡೆಸುತ್ತಿದ್ದಿರಾ, ನಿಮ್ಮನ್ನು ಅರೆಸ್ಟ್​ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ಮಾಟಮಂತ್ರದ ಶಂಕೆ : ಮಹಿಳೆಗೆ ಮೂತ್ರ ಕುಡಿಸಿ, ಮೆರವಣಿಗೆ ಮಾಡಿದ ಗ್ರಾಮಸ್ಥರು !

ಈ ವೇಳೆ ಅಂಕಲ್​ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಬಟ್ಟೆಯನ್ನು ಬಿಚ್ಚಿಸಿ ನಗ್ನ ಪೋಟೋ ತೆಗೆದುಕೊಂಡಿದ್ದರು. ನಂತರ ಸ್ಟೇಶನ್​ಗೆ ಹೋಗೋದು ಬೇಡ ಎಂದರೆ ಇಲ್ಲೆ ಸೆಟಲ್​ ಮಾಡ್ಕೋ ಎಂದಿದ್ದ ಆರೋಪಿಗಳು. ಅಂಕಲ್​ ಬಳಿಯಲ್ಲಿ 29 ಸಾವಿರ ನಗದು, 26 ಸಾವಿರ ಹಣವನ್ನು ಪೋನ್​ ಪೇನಲ್ಲಿ ಕಳಿಸಿಕೊಂಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು 5 ಲಕ್ಷ ಮೌಲ್ಯದ ಚಿನ್ನವನ್ನು ಪಡೆದಿದು ಎಸ್ಕೇಪ್​ ಆಗಿದ್ದರು.

ನಂತರ ಅಂಕಲ್​ ಯುವತಿಗೆ ಇವರ ವಿರುದ್ದ ದೂರು ಕೊಡೋಣ ಎಂದು ಹೇಳಿದ್ದನು. ಆದರೆ ಈ ವೇಳೆ ತಪ್ಪಿಸಿಕೊಳ್ಳಲು ಹೊಸ ವರಸೆ ತೆಗೆದಿದ್ದ ಯುವತಿ. ಸ್ಟೇಷನ್​ಗೆ ಕಂಪ್ಲೇಟ್​ ಕೊಟ್ಟರೆ, ಮಗು ಕರೆದುಕೊಂಡು ನಿಮ್ಮ ಮನೆಗೆ ಬರುತ್ತೇನೆ ಎಂದು ಬ್ಲಾಕ್​ ಮೇಲ್​ ಮಾಡಿದ್ದಳು. ಇದರಿಂದ ಹೆದರಿದ್ದ ಅಂಕಲ್​ ಕಂಪ್ಲೇಟ್​ ಕೊಡದೆ ಸುಮ್ಮನಿದ್ದನು. ಆದರೆ ನಂತರ ಧೈರ್ಯ ಮಾಡಿ ಬ್ಯಾಡರಹಳ್ಳಿ ಪೊಲೀಸ್​ ಠಾಣೆಗೆ ಅಂಕಲ್​ ದೂರು ನೀಡಿದ್ದನು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಸಂತೋಶ್​, ಅಜಯ್​, ಜಯರಾಜ್​ ಎಂಬುವವರನ್ನು ಬಂಧಿಸಿದ್ದರು. ಆದರೆ ಯೋಜನೆಯ ಕಿಂಗ್​ ಪಿನ್​ ನಯನಾ ತಲೆ ಮರಿಸಿಕೊಂಡಿದ್ದಳು. ಆದರೆ ಇಂದು ಪೊಲಿಸರು ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

RELATED ARTICLES

Related Articles

TRENDING ARTICLES