ಟಿಎಲ್ ಎಂಟರ್‌ಪ್ರೈಸಸ್‌ನಲ್ಲಿ ಅಕ್ಷಯ್ ಕೆಲಸ ಮಾಡುತ್ತಿದ್ದ. ಟಿಎಲ್ ಎಂಟರ್‌ಪ್ರೈಸಸ್, ಎಟಿಎಂಗೆ ಹಣ ತುಂಬುವ ಏಜೆನ್ಸಿ ಪಡೆದಿತ್ತು. ಮೈಸೂರು ಜಿಲ್ಲೆಯ ಒಟ್ಟು 16 ಎಟಿಎಂಗಳಿಗೆ ಅಕ್ಷಯ್ ಹಣ ತುಂಬುತ್ತಿದ್ದ. ಕಂಪನಿ ಪರವಾಗಿ ಹೋಗಿ ಹಣ ತುಂಬುವ ಕೆಲಸ ಮಾಡಿದ್ದ. ಕಂಪನಿ ಆಡಿಟ್ ಮಾಡಿದಾಗ ಹಣದಲ್ಲಿ ವ್ಯತ್ಯಾಸ ಕಂಡುಬಂದಿದೆ.
ಇದನ್ನೂ ಓದಿ :ಪ್ರೀತಿಸುವ ನೆಪದಲ್ಲಿ ಅಪ್ರಾಪ್ತ ಹೆಣ್ಣುಮಕ್ಕಳೊಂದಿಗೆ ಕಾಮದಾಟ : ವಿಕೃತ ಕಾಮಿ ಅರೆಸ್ಟ್ !
ಈ ವೇಳೆ ಅನುಮಾನ ಬಂದ ಕಂಪನಿ ಸಿಬ್ಬಂದಿಗಳು ಪರಿಶೀಲನ ನಡೆಸಿದಾಗ ಗದ್ದಿಗೆ ಗ್ರಾಮದ ಎಟಿಎಂನಲ್ಲಿ ಆರೋಪಿ ಅಕ್ಷಯ್ ಎಟಿಎಂಗೆ ಹಣವನ್ನು ಹಾಕದೆ ಬ್ಯಾಗ್ನಲ್ಲಿ ತುಂಬಿಕೊಂಡಿದ್ದ ದೃಶ್ಯ ಸೆರೆಯಾಗಿತ್ತು. ಈತನ ಈ ಕೃತ್ಯಕ್ಕೆ ತೇಜಸ್ವಿನಿ ಎಂಬಾಕೆ ಕುಮ್ಮಕ್ಕು ನೀಡಿದ ಆರೋಪ ಕೇಳಿಬಂದಿದ್ದು. ಇಬ್ಬರೂ ಸೇರಿ ಕದ್ದ ಹಣದಲ್ಲಿ ಇಬ್ಬರು ಚಿನ್ನ ಖರೀದಿಸಿರುವ ದೃಷ್ಯ ಸೆರೆಯಾಗಿದೆ.
ಘಟನೆ ಸಂಬಂಧ ಟಿಎಲ್ ಸಂಸ್ಥೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಇಬ್ಬರ ವಿರುದ್ದ ಎಫ್ಐಆರ್ ದಾಖಲಾಗಿದೆ ಎಂದು ಮಾಹಿತಿ ದೊರೆತಿದೆ.