ಶಿವಮೊಗ್ಗ : ಕರ್ನಾಟಕ ರಾಜ್ಯದ ಹಿರಿಯ ರಾಜಕಾರಣಿ ಮಲೆನಾಡಿನ ಹೋರಾಟಗಾರ ಸಮಾಜವಾದಿ ನಾಯಕ ಮಾಜಿ ವಿಧಾನಸಭಾ ಅಧ್ಯಕ್ಷ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪರಿಗೆ ಬಯಸದ ಭಾಗ್ಯದಂತೆ ಮತ್ತೊಂದು ಡಾಕ್ಟರೇಟ್ ಪದವಿ ಲಭ್ಯವಾಗಿದೆ.
ಗುರುವಾರ ಸಂಜೆ ಸಾಗರದ ಜೋಸೆಫ್ ನಗರದಲ್ಲಿರುವ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳು ಡಾಕ್ಟರೇಟ್ ಪದವಿ ನೀಡುವ ಬಗ್ಗೆ ಘೋಷಣೆ ಮಾಡಿ ಹೋಗಿದ್ದರು. ಆದರೆ ಬಯಸಿದ ಭಾಗ್ಯದಂತೆ ನಿನ್ನೆ ಶುಕ್ರವಾರ ಕಾಗೋಡು ತಿಮ್ಮಪ್ಪ ರವರ ನಿವಾಸಕ್ಕೆ ಭೇಟಿ ನೀಡಿದ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊಫೆಸರ್ ಶರತ್ ಅನಂತಮೂರ್ತಿರವರು ಇದೇ 22ನೇ ತಾರೀಕಿಗೆ ನಡೆಯಲಿರುವ 34ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರವರಿಗೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ : ಗವಿಮಠವನ್ನು ಬೇರೊಂದು, ಮಠದ ಜೊತೆ ಹೋಲಿಕೆ ಮಾಡಬೇಡಿ : ಕಣ್ಣೀರಾಕಿದ ಗವಿಶ್ರೀ !
ಒಟ್ಟಾರೆ ಬಯಸದೇ ಬಂದ ಭಾಗ್ಯದಂತೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ರವರಿಗೆ ಎರಡು ಡಾಕ್ಟರೇಟ್ ಪದವಿ ಲಭ್ಯವಾಗಿದ್ದು, ಮಲೆನಾಡಿನ ಜನರಲ್ಲಿ ಸಂತೋಷ ಮನೆ ಮಾಡಿದೆ.