Thursday, April 3, 2025

ಪೂಜ್ಯ ತಂದೆಯವರ ಜೊತೆಗೆ ಬೇರೆಯವರು ಸೈಕಲ್​ ತುಳಿದಿದ್ದಾರೆ, ಅದಕ್ಕೆ ಪಕ್ಷವಿದೆ : ಯತ್ನಾಳ್​

ವಿಜಯಪುರ : ಜಿಲ್ಲೆಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಶಾಸಕ ಯತ್ನಾಳ ವಿಜಯೇಂದ್ರ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಅನೇಕರು ಸೈಕಲ್​ ತುಳಿದಿದ್ದಾರೆ. ಕೇವಲ ಯಡಿಯೂರಪ್ಪರೊಬ್ಬರೆ ಸೈಕಲ್​ ತುಳಿದಿಲ್ಲ ಎಂದು ಹೇಳಿದರು.

ರಮೇಶ್​ ಜಾರಕಿಹೋಳಿ ಬಗ್ಗೆ ವಿಜಯೇಂದ್ರ ಹೇಳಿಕೆ ಕುರಿತು ಮಾತನಾಡಿದ ಯತ್ನಳ್​ ‘ ಯಡಿಯೂರಪ್ಪನವರು ಸಿಎಂ ಆಗಲು ಕಾರಣ ರಮೇಶ ಜಾರಕಿಹೋಳಿ, ನೀವು ಇಷ್ಟೆಲ್ಲ ದುಡ್ಡು ಮಾಡಲು ಕಾರಣ ರಮೇಶ ಜಾರಕಿಹೋಳಿ‌ ಅವರು. ನೀವು ಎಷ್ಟು‌ ದುಡ್ಡು ಮಾಡಿದ್ದೀರಿ ಎಂಬುದು ಜಗತ್ತಿಗೆ ಗೊತ್ತಿದೆ. ಉಮೇಶ ಎನ್ನುವ ಕಂಡೆಕ್ಟರ್ ಮನೆಯಲ್ಲಿ ಸಾವಿರಾರು ಕೋಟಿ‌ ನಗದು, ಖರೀದಿ ಬಾಂಡ್ ಸಿಗುತ್ತದೆ ಅದು ಯಾರದು.ರಮೇಶ ಜಾರಕಿಹೋಳಿ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಅವರು ಎಸ್ಟಿ ನಾಯಕರಿದ್ದಾರೆ. ನೀರಾವರಿಯಲ್ಲಿ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದರು, ಅವರನ್ನು ಬಲಿ ಕೊಟ್ಟಿದ್ದು ಯಾರು ವಿಜಯೇಂದ್ರ..? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ನಾನು ಬಂದಿದ್ಕೆ ನಿಮ್ಮಪ್ಪ ಸಿಎಂ ಆಗಿದ್ದು, ಅದೇ ಹರಾಮಿ ದುಡ್ಡಲ್ಲಿ ನೀನು ಓಡಾಡ್ತಿದ್ದಿಯ :ರಮೇಶ್​ ಜಾರಕಿಹೋಳಿ

ಬಿಜೆಪಿ ಪಕ್ಷಕ್ಕಾಗಿ ಅನೇಕರು ಹೋರಾಟ ಮಾಡಿದ್ದಾರೆ. ಅದೆಷ್ಟೋ ಕಾರ್ಯಕರ್ತರು ಸೈಕಲ್ ಹೊಡೆದು ಹೋರಾಟ ಮಾಡಿದ್ದಾರೆ, ಜಗನ್ನಾಥ್ ರಾವ್ ಜೋಶಿ, ಅನಂತ ಕುಮಾರ, ಬಸವರಾಜ್ ಪಾಟೀಲ್ ಸೇಡಂ ಇವರೆಲ್ಲರ ಪರಿಣಾಮವಾಗಿ ಬಿಜೆಪಿ ಕರ್ನಾಟಕದಲ್ಲಿ ಗಟ್ಟಿಯಾಗಿ ನಿಂತಿದೆ. ಒಬ್ಬಲೆ ಸೈಕಲ್​ ಹೊಡೆದು ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ. ಕೇವಲ ಪೂಜ್ಯ ತಂದೆಯವರು ಮಾತ್ರ ಬಿಜೆಪಿಗಾಗಿ ದುಡಿದಿಲ್ಲ. ಕೆಲವರು ಬಿಜೆಪಿ ದುಡಿದಿದ್ದಾರೆ ಅಂತವರಿಗೆ ಏನು ಮಾಡಿಲ್ಲ. ಇದರ ಬಗ್ಗೆ ನೀವು ವಿಚಾರ ಮಾಡಬೇಕಿದೆ.ಆದರೆ ನಿಮ್ಮಪ್ಪ ನಾಲ್ಕು ಬಾರಿ ಸಿಎಂ ಆಗಿದ್ದಾರೆ, ವಿರೋಧ ಪಕ್ಷದ ನಾಯಕನಾಗಿದ್ದಾನೆ, ಸೋತಾಗ ಎಂಎಲ್​ಸಿ, ರಾಜ್ಯಧ್ಯಕ್ಷ ಎಲ್ಲವನ್ನು ಮಾಡಿದ್ದಾರೆ.

ಯಡಿಯೂರಪ್ಪಗಿಂತ ನಾನು ಸೀನಿಯರ್​ !

ನಾನು ಬಿಜೆಪಿಯಲ್ಲಿ ಇದ್ದಾಗ ನನಗೆ ಮೊದಲು ಹೊರಗೆ ಹಾಕಿದ್ರಿ. ಬಳಿಕ ನಾನು ಮೊದಲು ಬಿಜೆಪಿ ಸೇರಿದೆ ಆಮೇಲೆ ನೀವು ಬಂದಿರಿ. ಹಾಗಿದ್ದರೆ ಯಡಿಯೂರಪ್ಪನಿಗಿಂತ ಸಿನಿಯರ್ ನಾನು ಇದ್ದೀನಿ. ಮೊದಲು ನನ್ನನ್ನು ಬಿಜೆಪಿಗೆ ಮೊದಲು ತಗೊಂಡರು. ಬಳಿಕ ಯಡಿಯೂರಪ್ಪ ಬಂದರು. ಅದು ಕೂಡ ನಾನು ಅರುಣ್​ ಜೇಟ್ಲಿಗೆ ಹೇಳಿದ್ದಕ್ಕೆ.

ಯಡಿಯೂರಪ್ಪನವರಿಗೆ ಪ್ರದೇಶ ಅಧ್ಯಕ್ಷ ಮಾಡಿ ಮುಖ್ಯಮಂತ್ರಿ ಕ್ಯಾಂಡಿಡೇಟ್ ಮಾಡಿ ಎಂದು ಹೇಳಿದೆ.
ಆಗ ಯಡಿಯೂರಪ್ಪ ನವರಿಗಿಂತ ನಾನೇ ಸೀನಿಯರ್ ಆದೇ,ಆದರೆ ವಿಜಯೇಂದ್ರ ಯಾವಾಗ ಪಕ್ಷಕ್ಕೆ ಬಂದದ್ದು.
ವಿಜಯೇಂದ್ರ ಒಬ್ಬ ಕಲೆಕ್ಷನ್ ಮಾಸ್ಟರ್. ರಾಜ್ಯಾಧ್ಯಕ್ಷ ಆಗುವ ತನಕ ಪಕ್ಷಕ್ಕಾಗಿ ಈತ ಏನು ಮಾಡಿದ್ದಾನೆ.
ಯಡಿಯೂರಪ್ಪ ನವರನ್ನು ಜೈಲಿಗೆ ಕಳುಹಿಸಲು ಕಾರಣೀಕರ್ತನೇ ಈ ಮಹಾನ್ ನಾಯಕ ಇವನು.

ನಿಮ್ಮ ಕೈಯಲ್ಲಿ ಆಗದೆ ಇದ್ದರೆ, ರಾಜ್ಯಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿ, ಹೊಸ ಅಧ್ಯಕ್ಷರು ಬರುತ್ತಾರೆ. ನಮ್ಮ ಕೈಯಲ್ಲಿ ಬಿಜೆಪಿ ಬಿಜೆಪಿ ಪಕ್ಷದ ಅಧಿಕಾರ ಸಿಕ್ಕರೆ 130 ಸೀಟ್​ ಗೆಲ್ಲಿಸುತ್ತೇವೆ. ಒಂದು ವೇಳೆ ನನ್ನ ಕೈಯಲಿ ಆಗದಿದ್ದರೆ, ರಾಜಕೀಯದಿಂದ ನಿವೃತ್ತಿ ಆಗುತ್ತೇನೆ ಎಂದು ಯತ್ನಾಳ್​ ಹೇಳಿದರು.

RELATED ARTICLES

Related Articles

TRENDING ARTICLES