ಮಂಡ್ಯ : ಎರಡು ಬೈಕ್ಗಳ ನಡುವೆ ಅಪಘಾತವಾಗಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು 26 ವರ್ಷದ ಶರಣ್ಯ ಎಂದು ಗುರುತಿಸಲಾಗಿದೆ.
ಮಂಡ್ಯದ ಬಾಳೆಹೊನ್ನಿಗ ಗ್ರಾಮದ ಶರಣ್ಯ ನರೇಗಾ ಯೋಜನೆಯ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇನ್ನೇನು 20 ದಿನಗಳಲ್ಲಿ ಶರಣ್ಯ ಹಸೆಮಣೆ ಏರಬೇಕಿತ್ತು. ಆದರೆ ಇಂದು ತನ್ನ ಗ್ರಾಮದಿಂದ ಹಲಗೂರು ಕಡೆಗೆ ಶರಣ್ಯ ತನ್ನ ಬೈಕ್ನಲ್ಲಿ ಹೋಗುತ್ತಿದ್ದಳು. ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಮತ್ತೊಂದು ಬೈಕ್ ಶರಣ್ಯ ತೆರಳುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ.
ಇದನ್ನೂ ಓದಿ : ಪೂಜ್ಯ ತಂದೆಯವರ ಜೊತೆಗೆ ಬೇರೆಯವರು ಸೈಕಲ್ ತುಳಿದಿದ್ದಾರೆ, ಅದಕ್ಕೆ ಪಕ್ಷವಿದೆ : ಯತ್ನಾಳ್
ಈ ವೇಳೆ ಶರಣ್ಯ ನೆಲಕ್ಕೆ ಅಪ್ಪಳಿಸಿದ್ದು. ತಲೆಗೆ ತೀವ್ರತರವಾದ ಪೆಟ್ಟಾಗಿದೆ. ಈ ವೇಳೆ ತೀವ್ರವಾಗಿ ಉಂಟಾದ ರಕ್ತಸ್ರಾವದಿಂದ ಯುವತಿ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಹಲಗೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು. ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.